ಕೆಲ್ಸಕ್ಕೆ ಮಾತ್ರ ಕರೀಬೇಡಿ, ಊಟಕ್ಕೆ…

Advertisement

ಬೆಂಗಳೂರು: “ಕೆಲ್ಸಕ್ಕೆ ಮಾತ್ರ ಕರೀಬೇಡಿ, ಊಟಕ್ಕೆ ಮಾತ್ರ ಮರೀಬೇಡಿ” ಎಂಬಂತೆ ಕಂದಾಯ ಇಲಾಖೆಯನ್ನು ಜನರ ಸುಲಿಗೆ ಮಾಡಲು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ ಸರ್ಕಾರ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಆಸ್ತಿ ತೆರಿಗೆ ಹೆಚ್ಚಳ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಆಸ್ತಿ ತೆರಿಗೆ ಹೆಚ್ಚಳ, ಸ್ಟ್ಯಾಂಪ್ ದರ ಹೆಚ್ಚಳ, ಗೈಡೆನ್ಸ್‌ ವ್ಯಾಲ್ಯೂ ಹೆಚ್ಚಳ ಹೀಗೆ ಸಾಧ್ಯವಾದಲೆಲ್ಲಾ ಕಂದಾಯ ಇಲಾಖೆಯ ಸೇವೆಗಳ ದರ ಹೆಚ್ಚಿಸಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮಾತ್ರ ಸದಾ ಸರ್ವರ್ ಡೌನ್ ಎಂದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
“ಕೆಲ್ಸಕ್ಕೆ ಮಾತ್ರ ಕರೀಬೇಡಿ, ಊಟಕ್ಕೆ ಮಾತ್ರ ಮರೀಬೇಡಿ” ಎಂಬಂತೆ ಕಂದಾಯ ಇಲಾಖೆಯನ್ನು ಜನರ ಸುಲಿಗೆ ಮಾಡಲು ಬಳಸಿಕೊಳ್ಳುತ್ತಿರುವ ಕರ್ನಾಟಕ ಕಾಮಗ್ರೆಸ್‌ ಸರ್ಕಾರ, ಸಾರ್ವಜನಿಕರಿಗೆ ಅಗತ್ಯ ಸೇವೆ ಒದಗಿಸುವತ್ತ ಗಮನ ಕೊಡದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದಿದ್ದಾರೆ.