ಗದಗ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಪದವಿಪೂರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದ ಸುಪರವಾಯಿಸರ್‌ನನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಶಿಕ್ಷಕ ಎಸ್.ಎಸ್. ರಾಜೂರ ಎಂದು ಗುರುತಿಸಲಾಗಿದೆ. ಪರೀಕ್ಷಾ ಕೇಂದ್ರದ ಸುಪರವಾಯಿಸರ್ ಎಸ್.ಎಸ್.ರಾಜೂರ, ಮಹಾವಿದ್ಯಾಲಯದ ಉಪಪ್ರಾಚಾರ್ಯ ಮಾರುತಿ ಸೋನಾವಾನೆ ಸೂಚನೆಯಂತೆ ಸುಮಿತಕುಮಾರ ಸೋನಾವಾನೆಗೆ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆಯನ್ನು ಸ್ಕ್ಯಾನ್ ಮಾಡಲು ಸಹಕಾರ ನೀಡಿದ್ದ ಎನ್ನಲಾಗಿದೆ. ಈಗಾಗಲೇ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್. ಕುಲಕರ್ಣಿ, ಉಪಪ್ರಾಚಾರ್ಯ ಮಾರುತಿ ಸೋನಾವಾನೆ, ಪುತ್ರ ಸುಮೀತಕುಮಾರನನ್ನು ಈಗಾಗಲೇ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.