ಕುರ್‌ಕುರೆ ಪ್ಯಾಕೆಟ್‌ನಲ್ಲಿ 500 ರೂ. ಗರಿ ಗರಿ ನೋಟು…!

5 ಕ್ಕೆ 500
ಸಾಂದರ್ಭಿಕ ಚಿತ್ರ
Advertisement

ರಾಯಚೂರು: ಕುರುಕುಲು ತಿಂಡಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಈ ಸ್ನ್ಯಾಕ್ಸ್‌ ಪ್ಯಾಕೆಟ್‌ಗಳಿಗೆ ಸಂಬಂಧಿಸಿದಂತೆ ಲಿಂಗಸೂಗೂರು ತಾಲೂಕಿನ ಹುನೂರು ಗ್ರಾಮದಲ್ಲಿ ಒಂದು ವಿಚಿತ್ರ ಹಾಗೂ ಆಶ್ಚರ್ಯಕರ ಸಂಗತಿಯೊಂದು ಗಮನ ಸೆಳೆದಿದೆ.
ಇಲ್ಲಿ ಮಾರಾಟವಾದ 5 ರೂ. ಬೆಲೆಯ ಪ್ಯಾಕೆಟ್‌ಗಳಲ್ಲಿ ರೂ. 500 ಮುಖಬೆಲೆಯ ಕರೆನ್ಸಿ ನೋಟುಗಳು ದೊರಕಿವೆ. ಒಬ್ಬ ಗ್ರಾಹಕನಿಗೆ 5-6 ಮತ್ತೊಬ್ಬನಿಗೆ 2-3 ನೋಟುಗಳು ಸಿಕ್ಕಿವೆ. ಈ ಸುದ್ದಿ ಊರಲ್ಲೆಲ್ಲ ಹಬ್ಬುತ್ತಿದ್ದಂತೆ ಜನ ಮುಗಿಬಿದ್ದು ಕುರ್‌ಕುರೆ ಪೊಟ್ಟಣಗಳನ್ನು ಖರೀದಿಸಿದ್ದಾರೆ. ಅಂಗಡಿಯಲ್ಲಿ ಸ್ಟಾಕ್ ಖಾಲಿಯಾಗಿದೆ, ಮಾಲೀಕ ಪುನಃ ಸ್ಟಾಕ್ ತರಿಸಿದಾಗ ಅವುಗಳಲ್ಲಿ ನೋಟು ಸಿಕ್ಕಿಲ್ಲ.
ಈ ನೋಟುಗಳು ಅಸಲಿಯೋ, ಖೋಟಾ ನೋಟುಗಳೋ ಅಂತ ಇನ್ನಷ್ಟೇ ಪತ್ತೆಯಾಗಬೇಕು. ಮುದುಗಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.