ಬಾಗಲಕೋಟ: ಜಿಲ್ಲೆಯ ಇಳಕಲ್ ನಗರದಲ್ಲಿ ಕಳೆದ 20 ದಿನಗಳಿಂದ ಸರಿಯಾಗಿ 24X7 ಕುಡಿಯುವ ನೀರನ್ನು ಬಿಡದೆ ಸಾರ್ವಜನಿಕರಿಗೆ ಸತಾಯಿಸುತ್ತಿರುವದರಿಂದ ಅಲಂಪೂರಪೇಟೆಯ ನಿವಾಸಿಗರು ಖಾಲಿ ಕೊಡಗಳನ್ನು ಪ್ರದರ್ಶನ ಮಾಡುತ್ತಾ ತಮಟೆಯನ್ನು ಬಾರಿಸುತ್ತಾ ನಗರಸಭೆ ಕಚೇರಿಯತ್ತ ಮೆರವಣಿಗೆ ಮೂಲಕ ಸಾಗಿದರು.
ನಗರಸಭೆ ಕಚೇರಿಯಲ್ಲಿ ವಾರ್ಡಿನ ಹಿರಿಯರು ಯುವಕರು ಮಹಿಳೆಯರು ನಗರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಾತನಾಡಿ ನಗರಸಭೆಯ ವತಿಯಿಂದ ಕೆಲವಂದಿಷ್ಟು ವಾರ್ಡುಗಳಲ್ಲಿ ನೀರು ಬಿಡುತ್ತೀರಿ ಕೆಲವಂದಿಷ್ಟು ವಾರ್ಡಗಳಿಗೆ ನೀರು ಬಿಡುತ್ತಿಲ್ಲ ಏಕೆ ಹೀಗೆ ಮಾಡುತ್ತಿದ್ದೀರಿ ನಾವು ನೀರಿನ ಕರವನ್ನು ಪ್ರತಿ ತಿಂಗಳು ತುಂಬುತ್ತಿಲ್ಲವೇ ನಮಗ್ಯಾಕೆ ನೀರು ಸರಿಯಾಗಿ ಬಿಡುತ್ತಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನೆಯನ್ನು ಮಾಡಿದರು.
ಪ್ರತಿಭಟನಕಾರರಿಗೆ ಉತ್ತರ ನೀಡಿದ ಪೌರಾಯುಕ್ತ ರಾಜು ಬಣಕಾರ ಅಲಮಟ್ಟಿಯಲ್ಲಿ 24X7 ಕುಡಿಯುವ ನೀರಿನ ಪೂರೈಕೆಯಲ್ಲಿ ಯಂತ್ರಗಳು ದುರಸ್ಥಿಗೆ ಬಂದಿದ್ದರಿಂದ ನೀರಿನ ಸಮಸ್ಯೆ ಉಂಟಾಗಿದೆ ಕೆಲವಂದಿಷ್ಟು ಇಳಿಜಾರಿನ ವಾರ್ಡುಗಳಿಗೆ ನೀರು ಬರುತ್ತಿದೆ. ಏರು ಪ್ರದೇಶದಲ್ಲಿ ನೀರು ಬರುತ್ತಿಲ್ಲ ಈ ಸಮಸ್ಯೆಯನ್ನು ಬೇಗನೆ ಸರಿಪಡಿಸಿ ಸಾರ್ವಜನಿಕರಿಗೆ ಇನ್ನುಮುಂದೆ ಇಂತಹ ಸಮಸ್ಯೆಗಳು ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಮಧಾನಪಡಿಸಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಿದರು.