ಕಿಂಗ್ ಚಾರ್ಲ್ಸ್ III ಅವರನ್ನು ಬ್ರಿಟನ್‌ನ ರಾಜ ಎಂದು ಅಕ್ಸೆಶನ್ ಕೌನ್ಸಿಲ್ ಅಧಿಕೃತವಾಗಿ ಘೋಷಿಸಿದೆ. ಲಂಡನ್‌ನ ಜೇಮ್ಸ್ ಪ್ಯಾಲೆಸ್‌ನಲ್ಲಿ ನಡೆದ ಪುರಾತನ ಸಂಪ್ರದಾಯ ಮತ್ತು ರಾಜಕೀಯ ಸಂದೇಶ ರವಾನಿಸುವ ಮಾದರಿಯ ಸಮಾರಂಭದಲ್ಲಿ ಘೋಷಿಸಲಾಗಿದ್ದು, ಇನ್ನೊಂದು ವಿಶೇಷವೆಂದರೆ ಮೊದಲ ಬಾರಿಗೆ ದೂರದರ್ಶನದಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ರಾಣಿ ಕ್ಯಾಮಿಲ್ಲಾ, ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಮತ್ತು ರಾಜಮನೆತನದ ಗಣ್ಯರು ಭಾಗಿಯಾಗಿದ್ದರು.