ಕಾಸರಗೋಡಿನಲ್ಲೊಂದು ಲವ್ ಜಿಹಾದ್ ಪ್ರಕರಣ

Advertisement

ಮಂಗಳೂರು: ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ನಾಪತ್ತೆಯಾಗಿದ್ದ ಶಿಕ್ಷಕಿಯೊಬ್ಬರು ಮುಸ್ಲಿಂ ಯುವಕನ ಜೊತೆ ಮದುವೆಯಾಗಿ ಪತ್ತೆಯಾಗಿದ್ದು, ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಕಾಸರಗೋಡು ಬದಿಯಡ್ಕದಲ್ಲಿ ಖಾಸಗಿ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದ ಯುವತಿ ನಾಪತ್ತೆಯಾಗಿದ್ದಳು. ಮೇ ೨೩ರಂದು ಮನೆಯಿಂದ ಹೊರಟ ಯುವತಿ ದಿಢೀರ್ ನಾಪತ್ತೆಯಾಗಿದ್ದಳು, ಈ ಕುರಿತಂತೆ ಯುವತಿಯ ತಂದೆ ಬದಿಯಡ್ಕದಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು.
ಈ ನಡುವೆ ಯುವತಿ ಹಾಗೂ ಯುವಕನೊಬ್ಬನ ಪೋಟೋ ಸಹಿತ ಮದುವೆ ಕುರಿತ ನೋಟಿಸ್ ಬದಿಯಡ್ಕ ರಿಜಿಸ್ಟ್ರಾರ್ ಕಚೇರಿ ಬೋರ್ಡ್‌ನಲ್ಲಿತ್ತು. ಮೇ ೨೭ ರಂದು ರಿಜಿಸ್ಟರ್ ಕಚೇರಿಯಲ್ಲಿ ಜೋಡಿ ಮದುವೆಯಾಗಿ ಬಳಿಕ ಬದಿಯಡ್ಕ ಠಾಣೆಗೆ ಹಾಜರಾಗಿದ್ದರು. ಬಳಿಕ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ಸ್ವ ಇಚ್ಚೆಯಿಂದ ತೆರಳಿದ್ದಾಗಿ ತಿಳಿಸಿದ್ದಾರೆ.
ಆದರೆ ಹಿಂದೂ ಸಂಘಟನೆಗಳು ಕಾಸರಗೋಡು ಜಿಲ್ಲೆಯಲ್ಲಿ ಲವ್ ಜಿಹಾದ್ ಸಕ್ರಿಯವಾಗಿದೆ ಎಂದು ಆರೋಪಿಸಿದ್ದು, ಆರ್ಥಿಕವಾಗಿ ಹಿಂದುಳಿದ ಮತ್ತು ಆಡಂಬರದ ಬದುಕಿನ ಆಮಿಷ ತೋರಿಸಿ ಹಿಂದೂ ಯುವತಿಯರನ್ನು ಲವ್ ಜಿಹಾದ್ನ ಜಾಲಕ್ಕೆ ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿವೆ. ಮುಸ್ಲಿಂ ಲೀಗ್‌ನಿಂದ ಹಿಂದೂ ಯುವತಿಯರ ಲವ್ ಜಿಹಾದ್, ಮತಾಂತರಕ್ಕೆ ಕುಮ್ಮಕ್ಕು ದೊರೆಯುತ್ತಿದ್ದು, ಬದಿಯಡ್ಕ ಪೊಲೀಸರು ಕೂಡಾ ಬೆಂಬಲ ನೀಡುತ್ತಿದ್ದಾರೆ ಎಂದು ಕಾಸರಗೋಡು ವಿಶ್ವ ಹಿಂದು ಪರಿಷತ್ ಆರೋಪಿಸಿದೆ.