ಅನೀಲ ಸೋರಿಕೆ ಹಿನ್ನೆಲೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿನ ಪ್ರಸನ್ ಪ್ರಿ-ಪ್ರೊಸೆಸಿಂಗ್ ಲಿಮಿಟೆಡನಲ್ಲಿ ಭಾನುವಾರ ರಾತ್ರಿ 10:30ರ ಸುಮಾರಿಗೆ ಸಂಭವಿಸಿದೆ.
ಘಟನೆಯಲ್ಲಿ ಮೃತಪಟ್ಟವರನ್ನು ಪಟ್ಟಣದ ವಾಂಜ್ರಿ ನಿವಾಸಿ ಎಂ.ಡಿ.ಶಾದಾಬ್(19) ಮಧ್ಯ ಪ್ರದೇಶ ಮೂಲದ ಇಂದ್ರಜೀತ್ ರಾಹುಲ್( 23)ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಡಿಸಿ ಗೋವಿಂದರೆಡ್ಡಿ, ಎಸ್.ಪಿ ಚನ್ನಬಸವಣ್ಣ ಲಂಗೋಟಿ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್, ಸಿಪಿಐ ಜಿ.ಎಂ.ಪಾಟೀಲ ಇದ್ದರು.