ಮುಂಬಯಿ: ಮಹಾರಾಷ್ಟ್ರದ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯ ಮೂರನೇ ಹಂತದ ನಿರ್ಮಾಣದ ವೇಳೆ ವಿಶೇಷ ಉದ್ದೇಶದ ಮೊಬೈಲ್ ಗ್ಯಾಂಟ್ರಿ ಕ್ರೇನ್ ಸೇತುವೆಯ ಚಪ್ಪಡಿ ಮೇಲೆ ಕುಸಿದು 16 ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 3 ಮಂದಿ ಗಾಯಗೊಂಡಿದ್ದಾರೆ. ಮುಂಬೈನಿಂದ ಸುಮಾರು 80 ಕಿಮೀ ದೂರದಲ್ಲಿರುವ ಶಾಹಪುರ್ ತೆಹಸಿಲ್‌ನ ಸರ್ಲಾಂಬೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ಪೊಲೀಸರು, ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.