ಬೀದರ್ : ತಾಲ್ಲೂಕಿನ ಮನ್ನಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಕ್ರಾಣ (ಕೆ) ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಹೊಲದಲ್ಲಿ ಜೋಳ ಕೊಯ್ಲು ಮಾಡುವ ಸಂದರ್ಭದಲ್ಲಿ ಮಹಿಳೆಯೋರ್ವಳ ಮೇಲೆ ಕಾಡು ಹಂದಿ ದಾಳಿ ನಡೆಸಿದ ಹಿನ್ನಲೆ ಸಾವನಪ್ಪಿದ್ದಾಳೆ.
ಕವಿತಾ ದಂಡೆನೋರ್ (೪೫) ಎನ್ನುವ ಮಹಿಳೆ ಸಾವಿಗೀಡಾಗಿದ್ದಾಳೆ. ಕಾಡು ಹಂದಿ ದಾಳಿ ನಡೆಸಿದ ವೇಳೆ ತೀವ್ರ ಗಾಯಗೊಂಡ ಮಹಿಳೆಯನ್ನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.