ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳ ಮಂಕುಬೂದಿ ಎರಚುತ್ತಿದೆ

Advertisement

ಬೆಂಗಳೂರು: ಕಾಂಗ್ರೆಸ್ ಸುಳ್ಳು ಗ್ಯಾರಂಟಿಗಳ ಮಂಕುಬೂದಿ ಎರಚುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಜಾರಿ ಆಗಿರುವ 5 ಗ್ಯಾರಂಟಿಗಳ ವೈಫಲ್ಯಗಳ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು “ಪಂಚರಾಜ್ಯಗಳ ಜನರಿಗೆ ಸುಳ್ಳು ಗ್ಯಾರಂಟಿಗಳ ಮಂಕುಬೂದಿ ಎರಚುತ್ತಿದೆ ಕಾಂಗ್ರೆಸ್.‌ ತೆಲಂಗಾಣದ ಜನರು ಈ ಪೊಳ್ಳು ಗ್ಯಾರಂಟಿಗಳಿಗೆ ಮರುಳಾಗಬಾರದು ಎನ್ನುವುದು ನನ್ನ ಮನವಿ.
*ಶಕ್ತಿ: ಬಸ್ಸುಗಳಿಲ್ಲ, ಜೆಸಿಬಿಗಳಲ್ಲಿ ಶಾಲಾ ಮಕ್ಕಳ ಪ್ರಯಾಣ
*ಗೃಹಜ್ಯೋತಿ: ಮಹಾದೇವಪ್ಪ ನಿಂಗೂ‌ ಕತ್ತಲು ಫ್ರೀ! ನಂಗೂ ಕತ್ತಲು ಫ್ರೀ!! ಕಾಕಾ ಪಾಟೀಲ್, ನಿಂಗೂ ಕತ್ತಲು ಫ್ರೀ!!
*ಗೃಹಲಕ್ಷ್ಮೀ: ಸದಾ ಸರ್ವರ್‌ ಸಮಸ್ಯೆ!
*ಅಕ್ಕಿಭಾಗ್ಯ: ಅಕ್ಕಿಗೆ ನೂರೆಂಟು ವಿಘ್ನ!
*ಯುವನಿಧಿ: ಬಾಲಗ್ರಹಪೀಡಿತ! ಎಂದಿದ್ದಾರೆ.