ಕನ್ಯಾಕುಮಾರಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ 3,570 ಕಿಲೋಮೀಟರ್ ಭಾರತ್ ಜೋಡೋ ಯಾತ್ರೆ ಪ್ರಾರಂಭಿಸಿದ್ದಾರೆ.
ಶ್ರೀಪೆರಂಬದೂರಿನಲ್ಲಿ ತಮ್ಮ ತಂದೆ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅಭಿಯಾನ ಶುರುಮಾಡಿದ್ರು. 150 ದಿನಗಳಲ್ಲಿ ಪ್ರತಿದಿನ 25 ಕಿಲೋ ಮೀಟರ್ಗಳಂತೆ ರಾಹುಲ್ ಹೆಜ್ಜೆ ಹಾಕಲಿದ್ದು, ಆಯಾ ರಾಜ್ಯದ ಮುಖಂಡರು ಸಾಥ್ ನೀಡಲಿದ್ದಾರೆ. ಈ ವೇಳೆ ರಾಹುಲ್ ಯಾರದ್ದೇ ಮನೆ, ಹೋಟೆಲ್, ಅತಿಥಿಗೃಹಗಳಲ್ಲಿ ಉಳಿದುಕೊಳ್ಳಲ್ಲ. ಬದಲಿಯಾಗಿ ಕಾಂಗ್ರೆಸ್ನಿಂದಲೇ ಕಂಟೇನರ್ಗಳಲ್ಲಿ ಎಲ್ಲಾ ವ್ಯವಸ್ಥೆಯ ಕೃತಕ ಮನೆ ರೂಪಿಸಲಾಗಿದೆ. ಅದ್ರಲ್ಲೇ ರಾಹುಲ್ ಮಲಗಲಿದ್ದಾರೆ. ಶಾಂತಿ ಮತ್ತು ಕೋಮು ಸೌಹಾರ್ದತೆಯ ಸಂದೇಶದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಭಾರತ ಐಕ್ಯತಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 30ರಂದು ಕರ್ನಾಟಕ ತಲುಪಲಿದ್ದು ಒಟ್ಟು 21 ದಿನ ಯಾತ್ರೆ ಸಾಗಲಿದೆ.