ಕಾಂಗ್ರೆಸ್ ಜನರ ಬದುಕಿನ ಗ್ಯಾರಂಟಿ ಕಸಿದುಕೊಂಡಿದೆ

Advertisement

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಜನರ ಬದುಕಿನ ಗ್ಯಾರಂಟಿ ಕಸಿದುಕೊಂಡಿದೆ. ರಾಜ್ಯದಲ್ಲಿ‌ ಲವ್ ಜಿಹಾದ ಗ್ಯಾರಂಟಿ ನೀಡುತ್ತಿದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಲವ ಜಿಹಾದ್ ನಡೆಯುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಗಂಭೀರವಾಗಿ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತೃಷ್ಟೀಕರಣ ನೀತಿಯಿಂದ ರಾಜ್ಯದಲ್ಲಿ ಮತಾಂಧ ಶಕ್ತಿ ಪ್ರೇರಣೆ ಸಿಕ್ಕಂತಾಗಿದೆ. ಮಹಿಳೆಯರಿಗೆ ಗ್ಯಾರಂಟಿ ನೀಡುವ ಸರ್ಕಾರ ರಕ್ಷಣಾ ಗ್ಯಾರಂಟಿ ನೀಡಿಲ್ಲ. ಈ ಮೂಲಕ ಹಿಂದೂಗಳಿಗೆ ಸಾವಿನ ಗ್ಯಾರಂಟಿ ಕೊಡುತ್ತಿದೆ ಎಂದರು.
ರಾಜ್ಯದಲ್ಲಿ ಇತ್ತೀಚೆಗೆ ಮಡಿಕೇರಿಯಲ್ಲಿ ಕಾರು ಹತ್ತಿಸಿದ ಘಟನೆ, ಮೈಸೂರಿನಲ್ಲಿ ಯುವಕನ ಮೇಲೆ ಹಲ್ಲೆ, ಹಾವೇರಿ ಅತ್ಯಾಚಾರ, ಹನುಮಾನ ಚಾಲಿಸ್ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ, ಬೆಳಗಾವಿ ಮಹಿಳೆ ವಿವಸ್ತ್ರ ಹೀಗೆ ಸಾಲು ಸಾಲು ಪ್ರಕರಣಗಳು ಕಾಂಗ್ರೆಸ್ ಅವಧಿಯಲ್ಲಿ ನಡೆದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬದಲಾಗಿ ಮತಾಂಧ ಶಕ್ತಿ ಬೆಳೆಸುವ ಅಜೆಂಡಾ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ನವರಿಗೆ ಕಾಳಜಿ ಇಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ ಬಾಂಬ ಇಟ್ಟವರಿಗೆ ಬ್ರದರ್ ಅನ್ನುತ್ತಾರೆ. ಸಿಎಂ ಹಾಗೂ ಗೃಹ ಸಚಿವ ನೇಹಾಳ ಹತ್ಯೆ ಇನ್ನುವರಿಗೂ ಖಂಡಿಸಿಲ್ಲ ಎಂದು ಹರಿಹಾಯ್ದರು.
ರಾಜ್ಯದಲ್ಲಿ ನೀರಿನ ಗ್ಯಾರಂಟಿ ಇಲ್ಲ, ಶಾಂತಿ ಸುವ್ಯವಸ್ಥೆ, ಮಹಿಳೆಯರ ಜೀವಕ್ಕೆ, ರೈತರ ಬದುಕಿಗೆ, ದಲಿತರ ಹಕ್ಕುಗಳಿಗೆ ಗ್ಯಾರಂಟಿ ಇಲ್ಲ. ಬದಲಾಗಿ ಅಲ್ಪಸಂಖ್ಯಾತರ ಯೋಜನೆಗಳಿಗೆ, ಗಲಭೆಕೋರರಿಗೆ, ಮತಾಂಧರಿಗೆ ಗ್ಯಾರಂಟಿ ಕೊಟ್ಟಿದ್ದಾರೆ ಎಂದರು.