ರಾಜಸ್ಥಾನ: ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ‘ಹನುಮಾನ್ ಚಾಲೀಸಾ’ ಆಲಿಸುವುದು ಅಪರಾಧವಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶವು ಹನುಮ ಜಯಂತಿಯನ್ನು ಆಚರಿಸುತ್ತಿರುವ ದಿನದಂದು ರಾಜಸ್ಥಾನದ ಟೋಂಕ್-ಸವಾಯಿ ಮಾಧೋಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಅಂಗಡಿಯಲ್ಲಿ ಕುಳಿತು ಹನುಮಾನ್ ಚಾಲೀಸಾ ಕೇಳುತ್ತಿದ್ದ ಎಂಬ ಕಾರಣಕ್ಕೆ ಅಂಗಡಿಯವನಿಗೆ ಕ್ರೂರವಾಗಿ ಥಳಿಸಲಾಗಿತ್ತು ಎಂದು ಕಿಡಿಕಾರಿದರು. ಈ ಬಾರಿಯ ರಾಮನವಮಿಯಂದು ಮೊದಲ ಬಾರಿಗೆ, ರಾಜಸ್ಥಾನದಲ್ಲಿ ಶೋಭಾಯಾತ್ರೆಯ ಮೆರವಣಿಗೆಯನ್ನು ನಡೆಸಲಾಯಿತು. ರಾಜಸ್ಥಾನದಂತಹ ರಾಜ್ಯದಲ್ಲಿ ಅಲ್ಲಿ ಜನರು ರಾಮ-ರಾಮ ಎಂದು ಜಪಿಸುತ್ತಾರೆ ಎಂದು ಹೇಳಿದರು.