ಕಾಂಗ್ರೆಸ್ಸಿಗೆ ಇನ್ಮುಂದೆ ಚೆಂಡು ಹೂವೇ ಶಾಶ್ವತ : ಸಿ.ಟಿ ರವಿ ವ್ಯಂಗ್ಯ

Advertisement

ಚಿಕ್ಕಮಗಳೂರು: ಕಾಂಗ್ರೆಸ್ಸಿಗರಿಗೆ ಇನ್ಮುಂದೆ ಚೆಂಡು ಹೂವೇ ಶಾಶ್ವತ, ಇನ್ನು ಮುಂದೆ ಅವರು ಕಿವಿಗೆ ಚೆಂಡು ಹೂವು ಇಟ್ಟುಕೊಂಡೇ ಓಡಾಡಬೇಕು ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದರು.
ಬಜೆಟ್ ಬಳಿಕ ನಗರದ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಜೆಟ್ ವಿರುದ್ಧ ಕಾಂಗ್ರೆಸ್ ಕಿವಿಗೆ ಹೂವಿಟ್ಟು ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಸಿದ್ಧ. ರಾಜ್ಯದಲ್ಲಿ ಕಮಲವೇ ಮತ್ತೆ ಅರಳುವುದು.‌ ಜನ ಕಾಂಗ್ರೆಸ್ಸಿಗೆ ಚೆಂಡುಹೂವು ಇಡಿಸುವ ಬದಲು, ನಾವೇ ಇಟ್ಟುಕೊಳ್ಳೋಣ ಎಂದು ಕಿವಿಗೆ ಇಟ್ಟುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.