ಕಾಂಗ್ರೆಸ್‌ನಿಂದ ಸಮಾಜಕ್ಕೆ ಕಂಟಕ

ಧಾರವಾಡ
Advertisement

ಧಾರವಾಡ: ಸದಾ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ದೇಶ ಹಾಗೂ ಸಮಾಜಕ್ಕೆ ಕಂಟಕ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕೇವಲ ಸ್ವಾರ್ಥಕ್ಕಾಗಿ, ಕುಟುಂಬ ಆಧಾರಿತ ರಾಜಕೀಯದಿಂದ ಸಮಾಜ ಒಡೆಯುವ ಕೆಲಸ ಮಾಡುತ್ತ ಬಂದಿದೆ ಎಂದರು.
ಕಾಂಗ್ರೆಸ್ ಧರ್ಮಾಚರಣೆ ಮತ್ತು ಧರ್ಮ, ಜನರ ಭಾವನೆಗಳನ್ನು ಗೌರವಿಸದ ಪಕ್ಷ. ದೇಶ ಹಾಗೂ ಸಮಾಜ ಒಡೆಯುವ ಕೆಲಸದಲ್ಲಿಯೇ ಕಾಲಹರಣ ಮಾಡುತ್ತ ಬಂದಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಅಳಿವಿನಂಚಿಗೆ ಬಂದಿದೆ. ಇದು ಅಪ್ರಸ್ತುತ ಪಕ್ಷ. ಬೇರೆಯವರ ಕಡೆಗೆ ಬೊಟ್ಟು ಮಾಡುವ ಮಲ್ಲಿಕಾರ್ಜುನ ಖರ್ಗೆ ಅವರು, ಕಾಂಗ್ರೆಸ್ ಮಾಡಿದ ಕೆಲಸ, ಸಾಧನೆ ಹಾಗೂ ನಡೆದು ಬಂದ ದಾರಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.