ಹಾವೇರಿ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಿಎಂ ಸಿದ್ದರಾಮನವರಿಗೆ ಮಾತನಾಡಲು ಏನೂ ಇಲ್ಲದ ಕಾರಣ ಸಂವಿಧಾನ ಬದಲಾಯಿಸುತ್ತಾರೆ ಎಂದು ರಾಜಕೀಯವಾಗಿ ಭಯ ಹುಟ್ಟಿಸಲು ಆರೋಪ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸವಣೂರಿನಲ್ಲಿ ಚುನಾವಣಾ ಪ್ರಚಾರಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನ ಬದಲು ಮಾಡುವ ಬಿಜೆಪಿ ಪಕ್ಷಕ್ಕೆ ಮತ ಹಾಕ್ಲಬೇಡಿ ಎಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಪ್ರತಿಕ್ರೀಯೆ ನೀಡಿದ ಅವರು, ಸಿದ್ದರಾಮಯ್ಯ ಅವರುಗೆ ಮೋದಿಯವರ ವಿರುದ್ದ ಹೇಳಲು ಏನೂ ಇಲ್ಲ. ಕಳೆದ ಬಾರಿ ಇದನ್ನೆ ಹೇಳಿದದ್ದರು. ಸಂವಿಧಾನ ಬದಲು ಮಾಡಲು ಯಾರ ಕೈಯಲ್ಲೂ ಆಗುವುದಿಲ್ಲ ಎಲ್ಲದಕ್ಕೂ ಕಾನೂನು ಅಂತ ಇದೆ. ಸಂವಿಧಾನ ಬದಲು ಮಾಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿದ್ದರಾಮಯ್ಯ ಸುಮ್ಮನೆ ರಾಜಕೀಯ ಭಯ ಹುಟ್ಟಿಸಲು ಈ ರೀತಿ ಹೇಳುತ್ತಿದ್ದಾರೆ. ಡಾ ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡುವ ಶಾಶ್ವತ ಕೆಲಸ ಮಾಡಿದ್ದಾರೆ ಎಂದರು.
ಭಾರತ ಮಾತೆ ಖುಷಿ ಪಡುತ್ತಾಳೆ
ಭಾರತ ಮಾತಾ ಕೀ ಜೈ ಎನ್ನುವುದು ಬಿಜೆಪಿಯ ಅಪ್ಪನ ಮನೆ ಆಸ್ತಿನಾ ಎಂಬ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತಿಗೆ ತಿರಗೇಟು ನೀಡಿದ ಬೊಮ್ಮಾಯಿಯವರು, ಅವರ ಹೇಳಿಕೆ ಸರಿಯಾಗಿದೆ ತಪ್ಪೆನೂ ಇಲ್ಲ. ಭಾರತ ಮಾತೆ ಕೈ ಜೈ ಎಂದು ಕೂಗಲು ಭಾರತದ ಮಕ್ಕಳಿಗೆ ಅಧಿಕಾರ ಇದೆ. ಕಾಂಗ್ರೆಸ್ ನವರು ಕೂಗಲಿ ನಾವು ಸ್ವಾಗತ ಮಾಡುತ್ತೇವೆ. ಭಾರತ ಮಾತೆ ಇನ್ನೂ ಖುಷಿ ಆಗುತ್ತಾಳೆ ಎಂದರು
ಭಾರತ ಮಾತಾ ಕಿ ಜೈ ಎಂದು ಹೇಳಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಪ್ಪಣೆ ಕೇಳಿರುವುದು ಅಲ್ಲಿರುವವರ ಮನಸ್ಥಿತಿ ಏನು ಅಂತಾ ಬಿಂಬಿಸುತ್ತದೆ ಎಂದು ಹೇಳಿದರು.
ಅವರ ಎಲೆಯೊಳಗೆ ಕಲ್ಲು ಬಿದ್ದಿದೆ
ಬಿಜೆಪಿ 400 ಸೀಟು ಗೆಲ್ಲುವುದಿಲ್ಲ, ಅದಿಕಾರಕ್ಕೆ ಬರುವುದಿಲ್ಲ ಎಂಬ ಸಿಎಂ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರ ಎಲೆಯೊಳಗೆ ಕಲ್ಲು ಬಿದ್ದಿದೆ. ಅವರು ಸ್ಪರ್ಧೆ ಮಾಡಿರುವುದೇ 230 ಸ್ಥಾನಗಳಿಗೆ ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ. ನಾವು 100% 370 ಸೀಟು ದಾಟುತ್ತೆವೆ
ಕೇಂದ್ರದಲ್ಲಿ ಮತ್ತೆ ನಮ್ಮ ಬಿಜೆಪಿ ಸರ್ಕಾರ ಬರುತ್ತದೆ ಎಂದರು
ಇದೇ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ನಾಥ ಸ್ವಾಮೀಜಿ ಅವರ ಪೋನ್ ಕದ್ದಾಲಿಕೆಯ ಆರೋಪಕ್ಕೆ ಪ್ರತಿಕ್ರೀಯಿಸಿ, ಪೋನ್ ಕದ್ದಾಲಿಕೆಯ ಬಗ್ಗೆ ಆರೋಪ ಪ್ರತ್ಯಾರೋಪ ಇವೆ.
ಯಾವುದಕ್ಕೂ ಸ್ಪಷ್ಟತೆ ಇಲ್ಲ. ಸ್ಪಷ್ಟತೆ ಇದ್ದಾಗ ಮಾತ್ರ ಅದರ ಬಗ್ಗೆ ಮಾತಾಡಬೇಕು ಎಂದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಥರ ಸಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಆಗುತ್ತಾರೆ ಎಂಬ ಮಾತಿಗೆ ಪ್ರತಿಕ್ರೀಯಿಸಿ, ಜನರು ತಿರ್ಮಾನ ಮಾಡಿದರೆ ಯಾಕ ಆಗಬಾರದು ಆಗಲಿ ಬಿಡಿ ಎಂದು ಹೇಳಿದರು.