ಕಸ ಚೆಲ್ಲಲು ಹೋದವನ ಮೇಲೆ ಕಲ್ಲು ಹಾಕಿದ ಕಿರಾತಕರು

ಬೆಳಗಾವಿ
Advertisement

ಬೆಳಗಾವಿ: ಕ್ಷುಲ್ಲಕ ಕಾರಣಕ್ಕಾಗಿ ಓರ್ವನ ಮೇಲೆ ಸುಮಾರು ನಾಲ್ವರಿದ್ದ ಗುಂಪು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ದಿನ ರಾತ್ರಿ ನಡೆದಿದೆ.
ಭಾಗ್ಯನಗರ ಮೊದಲನೇ ಕ್ರಾಸದಲ್ಲಿರುವ ದತ್ತ ಮಂದಿರ ಹತ್ತಿರ ಈ ಘಟನೆ ನಡೆದಿದೆ. ಅಶೀಶ್ ಶೆಣವೆ ಎಂಬುವರು ಕಸ ಚೆಲ್ಲಲು ಹೋಗಿದ್ದರು, ಈ ಸಂದರ್ಭದಲ್ಲಿ ಆಯ ತಪ್ಪಿ ಅಲ್ಲಿ ಹೋಗುವ ದ್ವಿಚಕ್ರ ವಾಹನಕ್ಕೆ ಅವನ ಕೈ ತಾಗಿದೆ. ಅಷ್ಟಕ್ಕೆ ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿ ತನ್ನ ಸ್ನೇಹಿತರನ್ನು ಕರೆಸಿದ್ದಾನೆ, ಅವರು ಬಂದವರೇ ಮತ್ತೇ ವಾದಕ್ಕಿಳಿದು ಶೆಣವೇ ಅವರನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಲ್ಲದೇ ದೊಡ್ಡದಾದ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ಶೆಣವೇ ಅವರ ತೆಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲ ಕಣ್ಣಿಗೂ ಪೆಟ್ಟಾಗಿ ರಕ್ತಸ್ರಾವವಾಗಿದೆ.
ಈ ಘಟನೆ ನಡೆಯುತ್ತಿದ್ದಂತೆ ಅಲ್ಲಿ ಸುತ್ತಲಿದ್ದ ಜನ ಧಾವಿಸಿ ಬಂದ ಸಂದರ್ಭದಲ್ಲಿ ಹಲ್ಲೆಕೋರರು ತಮ್ಮ ಎರಡು ದ್ವಿಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಸಧ್ಯ ವಾಹನವು ಅಲ್ಲಿಯೇ ಇದೆ. ತೀವೃವಾಗಿ ಗಾಯಗೊಂಡ ಅಶೀಶ್ ಶೆಣವೆ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ,