ಕಲ್ಲು ಕ್ವಾರಿ ಬ್ಲಾಸ್ಟ್‌: ಓರ್ವ ಸಾವು

Advertisement

ಕೋಲಾರ(ವೇಮಗಲ್) : ಹೋಬಳಿ ಕೆ.ಬಿ ಹೊಸಹಳ್ಳಿ ಗ್ರಾಮದ ಕಲ್ಲು ಕ್ವಾರಿಯಲ್ಲಿ ಬುಧವಾರ ರಾತ್ರಿ ಸ್ಟೋಟಗೊಂಡ ವೇಳೆ ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ಯಾಳಗಿತಾಂಡ ಗ್ರಾಮದ ಸೋಮು(26) ಎಂಬುವರು ಮೃತಪಟ್ಟಿದ್ದಾರೆ.
ಬುಧವಾರ ರಾತ್ರಿ ಗ್ರಾಮದಲ್ಲಿರುವ ಜಯರಾಮರೆಡ್ಡಿ, ದೇವರಾಜ್ ಮತ್ತು ಮುಜೀಬ್ ಎಂಬುವರಿಗೆ ಸೇರಿದ‌ ಕ್ವಾರಿಯಲ್ಲಿ ಕಲ್ಲು ಬ್ಲಾಸ್ಟ್ ಮಾಡುವಾಗ ದೇಹದ ಕೈ ಕಾಲುಗಳಿಗೆ ತೀವ್ರವಾದ ಗಾಯಾಗೊಂಡಿದ್ದ ಸೋಮು( 26) ಎಂಬುವರನ್ನು ಹೊಸಕೊಟೆ‌ ಎಂ‌.ವಿ.ಜೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಮೃತರ ಪತ್ನಿ ಜ್ಯೋತಿಬಾಯಿ ಮೂರು ಜನ ಮಕ್ಕಳು ಹಾಗೂ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.
ಈ ಹಿಂದೆ ಟೇಕಲ್‌ನಲ್ಲಿ ಇದೇ ರೀತಿ ಸ್ಟೋಟಗೊಂಡ ಘಟನೆ ನಡೆದಿದ್ದರೂ ಸರ್ಕಾರಗಳು ಸರಿಯಾದ ರೀತಿ ಕ್ರಮ ಕೈಗೊಳ್ಳುತ್ತಿಲ್ಲ, ಇದೇ ರೀತಿ ಮುಂದುವರೆಯುತ್ತಿದ್ದರು ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬೀದಿಗೆ ಬರಬೇಕಾದ ಪರಿಸ್ಥಿತಿ ಬರಲಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ಸಂಜೆ ಮಳೆ ಬರುತ್ತಿದ್ದ ಕಾರಣ ನಮ್ಮ ಪತಿ(ಸೋಮು ಮೃತ ವ್ಯಕ್ತಿ) ಒಂದು ಬಾರಿ ಕರೆ ಮಾಡಿ ಮಾತನಾಡಿದರು ಅಷ್ಟೇ ತದನಂತರ ಕರೆ ಮಾಡಿದಾಗ ಸ್ವೀಚ್ ಆಪ್ ಬಂತು. ಮೂರು ಜನ ಗಂಡು ಮಕ್ಕಳು ಇಂದು ಅನಾಥರಾಗಿ ಬೀದಿಗೆ ಬಿದ್ದಿದ್ದೆವೆ, ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ನಮ್ಮ ಕುಟುಂಬಕ್ಕೆ ಪರಿಹಾರ ದೊರಕಿಸಿ ನ್ಯಾಯ ಕೊಡಿಸಬೇಕೆಂದು ಮೃತರ ಪತ್ನಿ ಜ್ಯೋತಿಬಾಯಿ ಸರ್ಕಾರವನ್ನು ಒತ್ತಾಹಿಸಿದರು.
ಯಾದಗಿರಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ಯಾಳಗಿತಾಂಡ ಗ್ರಾಮದಿಂದ ಕೋಲಾರ ಜಿಲ್ಲೆಗೆ ವಲಸೆ ಬಂದು ಕೆ.ಬಿ ಹೊಸಹಳ್ಳಿ ಗ್ರಾಮದಲ್ಲಿ ಜೀವನ ಮಾಡುತ್ತಿದ್ದ ಕುಟುಂಬ ಇಂದು ಬೀದಿಗೆ ಬಿದ್ದಿರುವುದು ತುಂಬಾ ದುಃಖದ ವಿಚಾರವಾಗಿದೆ. ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುವವರಿಗೆ ಸೂಕ್ತ ಭದ್ರತ ರಕ್ಷಣಾ ಕವಚಗಳು ಇಲ್ಲ. ಕ್ವಾರಿ ಮಾಲೀಕರ ಬೇಜವ್ದಾರಿ ತನವೇ ಈ ಘಟನೆಗೆ ಕಾರಣವಾಗಿದೆ. ಈ ಘಟನೆಯನ್ನು ಎಲ್ಲಿಯೂ ಮಾಧ್ಯಮಗಳಲ್ಲಿ ಬರಬಾರದೆಂದು ತಪ್ಪಿಸಲು ಸಹ ನೋಡಿದರು.‌ ತಬ್ಬಲಿಯಾಗಿರುವ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಿಸಬೇಕೆಂದು ಮೃತರ ಕುಟುಂಬದ ರಾಮು ಒತ್ತಾಹಿಸಿದರು. ಈ ಪ್ರಕರಣ ವೇಮಗಲ್ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು. ಇನ್ನೂ ಘಟನೆ ಕುರಿತು ಕೆಲವರನ್ನು ವಿಚಾರಣೆ ಮಾಡುತ್ತಿದ್ದ ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.