ಕರ್ಮದಿಂದ ಮುಕ್ತಿ

Advertisement

ಈ ಜಗತ್ತಿನಲ್ಲಿ ಕಾರ್ಯಪ್ರವೃತ್ತರಾಗಿದ್ದುಕೊಂಡೂ ಕರ್ಮದಲ್ಲಿ ಸಿಲುಕಿಕೊಳ್ಳದಿರುವುದು ಹೇಗೆ? ನೋಡಿ, ನಾವು ಅನೇಕ ಕಾರ್ಯಗಳನ್ನು ಮಾಡಿದರೂ ಅವುಗಳ ಸಂಸ್ಕಾರಗಳು ನಮ್ಮ ಮನದಲ್ಲಿ ಉಳಿಯುವುದಿಲ್ಲ. ಉದಾಹರಣೆಗೆ, ಮುಂದಿನ ವಾರ, ಕಳೆದ ಶನಿವಾರದಂದು ಯಾವ ತಿಂಡಿಯನ್ನು ತಿಂದೆ?' ಎಂದು ನಾವು ಕೇಳಿದರೆ ನಿಮಗದರ ನೆನಪು ಇರುವುದಿಲ್ಲ. ಅಂದಿನ ದಿನ ಜಗಳವಾಡಿದ್ದರೆ ಮಾತ್ರ ನೆನಪಿನಲ್ಲಿರುತ್ತದೆ! ಯಾರಾದರೂ,ಡಿಸೆಂಬರ್ ೨೯ರಂದು ಮಧ್ಯಾಹ್ನ ಅಥವಾ ರಾತ್ರಿ ಏನನ್ನು ತಿಂದಿರಿ?’ ಎಂದು ಕೇಳಿದರೆ ನಿಮಗೆ ಉತ್ತರ ಕೊಡಲು ಸಾಧ್ಯವಿಲ್ಲ. ನೀವು ಉತ್ತರ ಹೇಳಬಲ್ಲಿರಾದರೆ ನಿಮಗದರ ಕರ್ಮವಿದೆಯೆಂದಾಯಿತು!
ಕೆಲವು ಚಟುವಟಿಕೆಗಳು ಮತ್ತು ಕಾರ್ಯಗಳು ಮನಸ್ಸಿನ ಮೇಲೆ ಯಾವ ಸಂಸ್ಕಾರವನ್ನೂ ಉಂಟು ಮಾಡದಿರುವುದರಿಂದ ಅವುಗಳ ಕರ್ಮವಿರುವುದಿಲ್ಲ. ಸೆಪ್ಟೆಂಬರ್ ೨೩ರಂದು ಯಾವ ಚಲನಚಿತ್ರವನ್ನು ವೀಕ್ಷಿಸಿದೆ?' ಎಂದು ನಾವು ಕೇಳಿದಾಗ ನಿಮಗದರ ನೆನಪಿಲ್ಲದಿದ್ದರೆ, ಆ ಚಲನಚಿತ್ರವು ನಿಮ್ಮ ಮೇಲೆ ಕರ್ಮವನ್ನು ಉಂಟು ಮಾಡಿಲ್ಲವೆಂದಾಯಿತು. ಫಲವತ್ತಾದ ಸಂಸ್ಕಾರವೇ ಕರ್ಮ. ಉದಾಹರಣೆಗೆ ಪ್ರತಿನಿತ್ಯ ನಿಮಗೆ ಕಾಫಿಯನ್ನು ಕುಡಿಯುವ ಅಭ್ಯಾಸವಿದ್ದು, ಒಂದು ದಿನ ಬೆಳಿಗ್ಗೆ ಎಚ್ಚೆತ್ತುಕೊಂಡಾಗ ಕಾಫಿಯಿಲ್ಲದಿದ್ದರೆ ಅಥವಾ ನೀವು ಕಾಫಿ ಕುಡಿಯಬಾರದೆಂದು ನಿರ್ಧರಿಸಿದರೆ, ಏನಾಗುತ್ತದೆ? ಜನರಿಗೆ ತಲೆನೋವು ಬರುತ್ತದೆಯೆಂದು ಹೇಳುವುದನ್ನು ಕೇಳಿದ್ದೇವೆ. ಇದೇಕಾಫಿ ಕರ್ಮ’ ! ಎಂದರೆ, ನೀವೇನಾದರೊಂದನ್ನು ಮಾಡದಿದ್ದರೆ ಅದಕ್ಕೊಂದು ಪ್ರತಿಕ್ರಿಯೆ ಉಂಟಾಗುತ್ತದೆ. ಆದರೆ ನೀವು ಈ ಕರ್ಮದಿಂದ ಹೊರಬರಬಹುದು.
ನಿಮಗೆ ತಲೆನೋವು ಬಂದಾಗ ಮತ್ತೊಮ್ಮೆ ಕಾಫಿ ಕುಡಿಯದೆ ಒಂದು ಆಸ್ಪಿರಿನ್ ಮಾತ್ರೆಯನ್ನು ತೆಗೆದುಕೊಂಡು ಅಥವಾ ಬಹಳ ನೀರು ಕುಡಿದು ಆ ನೋವನ್ನು ತಡೆದುಕೊಂಡರೆ, ಆಗ ಎರಡು-ಮೂರು ದಿನಗಳಲ್ಲಿ ಆ ತಲೆನೋವು ಹೊರಟು ಹೋಗುತ್ತದೆ. ಈ ರೀತಿಯಾಗಿ ಕಾಫಿ ಕರ್ಮ' ದಿಂದ ಹೊರಬರಬಹುದು. ಅದೇ ರೀತಿಯಾಗಿ ಧೂಮಪಾನ ಮಾಡುವವರಿಗೆಧೂಮಪಾನದ ಕರ್ಮ’ ಇರುತ್ತದೆ, ಧೂಮಪಾನ ಮಾಡಲೇಬೇಕೆಂಬ ಹೆಬ್ಬಯಕೆ ಇರುತ್ತದೆ. ಆದರೆ ಅವರು ಆ ಚಟಕ್ಕೆ ಇಲ್ಲ' ಎಂದು ಹೇಳಬಲ್ಲವರಾದರೆ, ಅದರಿಂದ ಹೊರಬರಬಹುದು. ಪ್ರತಿಯೊಂದು ಚಟವೂ ಒಂದು ಕರ್ಮದ ಮಾದರಿಯಲ್ಲದೆ ಬೇರೇನೂ ಅಲ್ಲ. ನೀವು ಅದಕ್ಕೆಇಲ್ಲ’ ಎಂದೊಡನೆಯೇ ಅದರಿಂದ ಹೊರಬರಲು ಪ್ರಾರಂಭಿಸಿಬಿಟ್ಟಂತೆಯೇ ಸರಿ.