ಕರುಗಳ ಮೇಲೆ‌ ಚಿರತೆ ದಾಳಿ

Advertisement

ಧಾರವಾಡ: ತಾಲೂಕಿನ ಮನಸೂರ ಗ್ರಾಮದಲ್ಲಿ ಮೂರು ಕರುಗಳ ಮೇಲೆ‌ಚಿರತೆ ದಾಳಿ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಜೋಶಿ ಫಾರ್ಮ್ ಹೌಸನಲ್ಲಿ ಕಟ್ಟಿದ್ದ ಆಕಳು ಕರುಗಳ ಮೇಲೆ ದಾಳಿ ನಡೆಸಿದ ಚಿರತೆ ದಾಳಿ ನಡೆಸಿದೆ. ಅಲ್ಲದೇ ಕಳೆದ ವಾರ ಇದೇ ಗ್ರಾಮದಲ್ಲಿ ಕರುವೊಂದನ್ನು ಕೊಂದ ಘಟನೆ ಮಾಸುವ ಮುನ್ನವೇ ಪುನಃ ಮೂರು ಕರುಗಳನ್ನು ಕೊಂದಿರುವುದು ಗ್ರಾಮಸ್ಥರನ್ನು ಭಯದ ವಾತಾವರಣದಲ್ಲಿ ಇರುವಂತೆ ಮಾಡಿದೆ.
ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಹಿಡಿಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.