ಯೋಗರಾಜ್ ಭಟ್ ಸಾಹಿತ್ಯ ಮತ್ತು ನಿರ್ದೇಶನದ ಕರಟಕ ದಮನಕ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.
ಶಿವರಾಜಕುಮಾರ್ ಮತ್ತು ಪ್ರಭುದೇವ ನಟನೆಯ ಕರಟಕ-ದಮನಕ ಸಿನಿಮಾ ಮಾರ್ಚ್ 8 ರಂದು ಶಿವರಾತ್ರಿಯ ಹಬ್ಬದ ಸಂಭ್ರಮಾಚರಣೆಯೊಂದಿಗೆ ಥಿಯೇಟರ್‌ಗೆ ಬರಲಿದೆ, ಶಿವರಾಜ್ ಕುಮಾರ್ ಇಲ್ಲಿ ಕರಟಕನಾಗಿ ಪ್ರಭುದೇವ್ ದಮನಕನಾಗಿ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಪ್ರಭುದೇವರಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಮತ್ತು ಪ್ರಿಯಾ ಆನಂದ್ ನಟಿಸುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ, ರಂಗಾಯಣ ರಘು, ರವಿ ಶಂಕರ್, ಭರಣಿ ಮುಂತಾದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಭಟ್ಟರ ಸಾಹಿತ್ಯ, ಶಂಕರ್ ಮಹಾದೇವನ್ ಗಾಯನ ಸೊಗಸಾದ ಹಾಡಿನ ಮೂಲಕ ಇಬ್ಬರು ನಾಯಕರ ಕ್ಯಾರೆಕ್ಟರ್ ಪರಿಚಯ ಮಾಡಿಸಿದೆ.
ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ಯೋಗರಾಜ್ ಭಟ್ರು ಪೋಸ್ಟ್ ಒಂದನ್ನು ಮಾಡಿದ್ದು ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ‘ಕರಟಕ’ ಇನ್ನೊಂದರ ಹೆಸರು ‘ದಮನಕ’. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ!!ಎಚ್ಚರಿಕೆ’ ಎಂದಿದ್ದರು, ಈಗ ಬಿಡುಗಡೆಯಾಗಿರುವ ಕರಟಕ ದಮನಕ ಸಿನಿಮಾದ ಟೈಟಲ್ ಟ್ರ್ಯಾಕ್‌ನಲ್ಲಿ ಇಬ್ಬರು ನರಿಗಳ ಪಂಚತಂತ್ರದ ಕಥೆಯ ಝಲಕ್ ಇದೆ.
ಬಹುನಿರೀಕ್ಷಿತ “ಕರಟಕ ದಮನಕ” ಚಿತ್ರದ ಟೈಟಲ್ ಟ್ರ್ಯಾಕ್ ನಿಮಗಾಗಿ….