ಬೆಂಗಳೂರು : I N D I ಕೂಟದಿಂದ DMK ಅನ್ನು ಹೊರಗಿಟ್ಟು ಕನ್ನಡಿಗರ ಮೇಲಿನ ಅಭಿಮಾನ ಮೆರೆಯಿರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಚುನಾವಣೆಗೂ ಮುಂಚೆ ಮೇಕೆದಾಟು ಪಾದಯಾತ್ರೆ ಮಾಡಿ ಮೊಸಳೆ ಕಣ್ಣಿರು ಸುರಿಸಿದ್ದ ಕರ್ನಾಟಕ ಕಾಂಗ್ರೆಸ್, ಚುನಾವಣೆ ನಂತರ ಕನ್ನಡಿಗರಿಗೆ ಕುಡಿಯಲೂ ನೀರಿಲ್ಲದಂತೆ ಕಾವೇರಿಯನ್ನು ತಮಿಳುನಾಡಿಗೆ ಹರಿಸಿ INDI ಮೈತ್ರಿಗಾಗಿ ಲಂಚ ನೀಡಿತ್ತು. ಇದೀಗ, ಮೇಕೆದಾಟು ಯೋಜನೆಗೆ ತಡೆ ನೀಡುತ್ತೇವೆಂದು ಡಿಎಂಕೆ ಚುನಾವಣಾ ಪ್ರಣಾಳಿಕೆ ಘೋಷಿಸಿದೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ ಅವರೇ ಇದು ಕನ್ನಡಿಗರಿಗೆ ದ್ರೋಹ ಬಗೆಯುವ ನಿಮ್ಮ ಷಡ್ಯಂತ್ರದ ಭಾಗವೇ? I N D I ಕೂಟದಿಂದ DMK ಅನ್ನು ಹೊರಗಿಟ್ಟು ಕನ್ನಡಿಗರ ಮೇಲಿನ ಅಭಿಮಾನ ಮೆರೆಯಿರಿ. ಇಲ್ಲವೇ, ʼಕೈʼಲಾಗಲ್ಲವೆಂದು ಅಧಿಕಾರ ಬಿಟ್ಟು ತೊಲಗಿ. ಕೇವಲ ಬೊಗಳೆ ರಾಜಕಾರಣ ಮಾಡದೇ, ನುಡಿದಂತೆ ಮೇಕೆದಾಟು ಯೋಜನೆಗೆ ಅನುಮತಿ ಪಡೆಯಿರಿ ಎಂದಿದ್ದಾರೆ.