ಕತ್ತಲು ಬೆಳಕಿನ ಗೆರೆಗಳ ನಡುವೆ

Advertisement

ಚಿತ್ರ: ಕಪ್ಪು ಬಿಳುಪಿನ ನಡುವೆ
ರೇಟಿಂಗ್ಸ್: 3

-ಜಿ.ಆರ್.ಬಿ

ಸಮರ್ಪಕ ರಸ್ತೆ, ಬೀದಿ ದೀಪಗಳಿಲ್ಲದ ದೇವಗಿರಿ ಎಂಬ ಒಂದು ಹಳ್ಳಿ. ಹಸಿರಿನಿಂದ ಮೈ ತುಂಬಿಕೊಂಡಿರುವ ಸ್ವಚ್ಛಂದದ ಊರಿನಲ್ಲಿ ರಾತ್ರಿ ಎಂದರೆ ಜನ ಭಯದಿಂದ ನಡುಗುತ್ತಾರೆ. ಅಗೋಚರ ಶಕ್ತಿಯೊಂದು ಸುಳಿದಾಡುತ್ತಿದೆ ಎಂದು ನಲುಗಿಹೋಗಿರುತ್ತಾರೆ…
ಇತ್ತ ನಗರದಲ್ಲಿ ಯೂಟ್ಯೂಬರ್‌ಗಳ ಘೋಸ್ಟ್ ಹಂಟಿಂಗ್ ಕಾರ್ಯಾಚರಣೆ ಜೋರಾಗಿರುತ್ತದೆ. ಒಮ್ಮೆ ದೇವಗಿರಿಗೂ ಹೋಗಿ ಬರುವ ಮನಸ್ಸು ಮಾಡುತ್ತಾರೆ. ಆ ಹಳ್ಳಿಗೆ ಅವರು ಕಾಲಿಟ್ಟ ನಂತರ ಕತ್ತಲು ಬೆಳಕಿನಲ್ಲಿ ಅಗೋಚರ ಶಕ್ತಿಗಳ ಅಚ್ಚರಿಯ ಸಂಗತಿಗಳು!
ಇದು ಕಪ್ಪು ಬಿಳುಪಿನ ನಡುವೆ ಸಿನಿಮಾದ ಒನ್‌ಲೈನ್. ಹಾರರ್-ಥ್ರಿಲ್ಲರ್ ಶೈಲಿಯ ಸಿನಿಮಾ ಇಷ್ಟಪಡುವವರಿಗೆ ಒಂದಷ್ಟು ಇಂಟರೆಸ್ಟಿಂಗ್ ವಿಷಯಗಳು ಈ ಸಿನಿಮಾದಲ್ಲಿ ಅಡಕವಾಗಿವೆ. ಒಂದು ಸರಳ ಕಥೆಗೆ ಥ್ರಿಲ್ಲಿಂಗ್ ಅಂಶಗಳ ಜತೆಗೆ ಹಾರರ್ ಮತ್ತು ಮನರಂಜನಾತ್ಮಕ ವಿಷಯಗಳನ್ನು ಬೆರೆಸಿದ್ದಾರೆ ನಿರ್ದೇಶಕ ವಸಂತ್ ವಿಷ್ಣು. ಹೀಗಾಗಿ ಪಾಸಿಟಿವ್ ಹಾಗೂ ನೆಗಟಿವ್ ಎನರ್ಜಿಗೆ ಸಿನಿಮಾ ಶೀರ್ಷಿಕೆಯನ್ನು ಹೋಲಿಸಿದ್ದಾರೆ ನಿರ್ದೇಶಕ.
ವಸಂತ್ ವಿಷ್ಣು, ವಿದ್ಯಾಶ್ರೀ ಗೌಡ ಪ್ರಮುಖ ಭೂಮಿಕೆಯಲ್ಲಿದ್ದು, ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಸಫಲರಾಗಿದ್ದಾರೆ. ಬಿರಾದಾರ್, ಶರತ್ ಲೋಹಿತಾಶ್ವ, ಹರೀಶ್, ನವೀನ್ ರಘು, ಮಾಹೀನ್ ಭಾರದ್ವಾಜ್, ತೇಜಸ್ವಿನಿ ಮುಂತಾದವರು ತಮ್ಮ ಪಾತ್ರಗಳಿಗೆ ತಕ್ಕಂತೆ ನಟಿಸಿದ್ದಾರೆ.
ರಿಶಾಲ್ ಸಾಯಿ ಸಂಗೀತ, ಪ್ರವೀಣ್ ಶೆಟ್ಟಿ ಕ್ಯಾಮೆರಾ ಕೈಚಳಕ ಹಾಗೂ ಅಮಿತ್ ಜಾವಲ್ಕರ್ ಸಂಕಲನ ಸಿನಿಮಾದ ಪ್ಲಸ್ ಪಾಯಿಂಟ್‌ಗಳಲ್ಲೊಂದು.