ಕಡ್ಲೆ ಬೀಚ್‌ನಲ್ಲಿ ಆಲಿವರ್ ಇಡ್ಲಿ ವರ್ಗಕ್ಕೆ ಸೇರಿದ ಆಮೆ ಕಳೆಬರ ಪತ್ತೆ

Advertisement

ಕುಮಟಾ: ಹೊಲನಗದ್ದೆಯ ಕಡ್ಲೆ ಸಮುದ್ರ ತೀರದಲ್ಲಿ ಆಲಿವರ್ ಇಡ್ಲಿ ವರ್ಗಕ್ಕೆ ಸೇರಿ ಆಮೆಯೊಂದರ ಕಳೆಬರ ಪತ್ತೆಯಾಗಿದೆ.
ಮೃತ ಆಮೆ ಸುಮಾರು ೪ ಅಡಿ ಉದ್ದದ ೩೦ ರಿಂದ ೪೦ ವರ್ಷದ್ದಾಗಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.
ಸಾಮಾನ್ಯವಾಗಿ ಆಳ ಸಮುದ್ರ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಈ ಜಾತಿಯ ಆಮೆಗಳು ಆಳ ಸಮುದ್ರ ಮೀನುಗಾರಿಕೆಯಲ್ಲಿ ಅಪರೂಪಕ್ಕೆ ಮೀನುಗಾರಿಕಾ ಬೊಟ್‌ಗಳ ಬಲೆಯಲ್ಲಿ ಸಿಕ್ಕಿ ಸಾಯುತ್ತವೆ. ಬಲೆಯಲ್ಲಿ ಸಿಕ್ಕಿ ಬಿದ್ದ ಆಮೆಗಳನ್ನು ಮೀನುಗಾರರು ಸುರಕ್ಷಿತವಾಗಿ ಸಮುದ್ರಕ್ಕೆ ಬಿಡುತ್ತಾರೆ ಆದರೆ ಬಲೆಯ ದಾರಗಳು ಆಮೇಗಳ ಕುತ್ತಿಗೆಗೆ ಸಿಕ್ಕಿ ಸಾಯುವುದೇ ಹೆಚ್ಚು. ಇಂಥವುಗಳಲ್ಲಿ ಕೆಲವಂದು ತೀರಕ್ಕೆ ತೇಲಿ ಬರುತ್ತದೆ ಎಂದು ಮೀನುಗಾರರಾದ ಮಂಜುನಾಥ ಅಂಬಿಗ, ಮಹಾದೇವ ಅಂಬಿಗ ಹೇಳುತ್ತಾರೆ.
ಮೀನುಗಾರರಿಗೆ ಆಮೆ ಎಂದರೆ ದೇವರ ರೂಪ. ಮೀನುಗಾರರಲ್ಲದ ಕೆಲವರು ಮಾತ್ರ ಇದನ್ನು ತಿನ್ನುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಸಹಾಯಕ ಅರಣ್ಯ ಅಧಿಕಾರಿ ಲೋಹಿತ್ ಅವರು ಅಮೆಯ ಕಳೆಬರಹ ವನ್ನು ಗುರುತಿಸಿ ಇದು ಆಲಿವರ್ ಇಡ್ಲಿ ವರ್ಗಕ್ಕೆ ಸೇರಿದ್ದು ಅರಬ್ಬಿ ಸಮುದ್ರ ತೀರದಲ್ಲಿ ಹೆರಳ ಸಂಖ್ಯೆಯಲ್ಲಿದೆ, ಇದು ತೀರಕ್ಕೆ ಮೊಟ್ಟೆ ಇಟ್ಟು ಮರಳಿ ಸಮುದ್ರವನ್ನು ಸೇರಿಕೊಳ್ಳುತ್ತವೆ. ಅನಾಥ ಮೊಟ್ಟೆಗಳು ಸಿಕ್ಕಿದರೆ ಅರಣ್ಯ ಇಲಾಖೆ ಅದನ್ನು ರಕ್ಷಿಸಿ ಮರಿಮಾಡಿ ಸಮುದ್ರಕ್ಕೆ ಬಿಡುತ್ತೇವೆ. ಇದರ ಬಗ್ಗೆ ಇಲಾಖೆಯು ಸಾರ್ವಜನಿಕರಿಗೂ ತಿಳಿವಳಿಕೆ ನೀಡಿದೆ ಎಂದರು.