ಕಟೀಲ್ ಅಲ್ಲ ಅವನು ಪಿಟೀಲ್ ಅಷ್ಟೇ…!

ಆರ್.ಬಿ. ತಿಮ್ಮಾಪುರ
Advertisement

ಬಾಗಲಕೋಟೆ: ನಳೀನ್‌ಕುಮಾರ್ ಕಟೀಲ್‌ವೊಬ್ಬ ಪಿಟೀಲ್ ಅಷ್ಟೇ… ಅವ್ನಷ್ಟು ಸುಳ್ಳು ಹೇಳೋ ಅಧ್ಯಕ್ಷನನ್ನು ನಾನು ನೋಡಿಲ್ಲ. ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳಸ್ತೀನಿ ಅಂತಿಯಲ್ಲಪ್ಪಾ ಇಷ್ಟು ದಿನ ಮಲಗಿದ್ದೇನೋ ಸಾಹೇಬಾ….! ಕಟೀಲ್ ಅಷ್ಟೇ ಅಲ್ಲ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಲು ಮೋದಿಗೂ ತಾಕತ್ತಿಲ್ಲ…!
ಹೀಗೆ ಏಕವಚನದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿರುದ್ಧ ಹರಿಹಾಯ್ದರು ಮಾಜಿ ಮಂತ್ರಿ ಆರ್.ಬಿ. ತಿಮ್ಮಾಪುರ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಳಿನ್‌ಕುಮಾರ್ ಕಟೀಲ್ ಮಾತಿಗೆ ಬೆಲೆ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯೂ ಆತನ ಮಾತು ಕೇಳುವುದಿಲ್ಲ. ಸರ್ಕಾರದ ಯಾರೊಬ್ಬರೂ ಆತನ ಮಾತಿಗೆ ಬೆಲೆ ಕೊಡುವುದಿಲ್ಲ ಎಂದು ಹರಿಹಾಯ್ದರು. ಚುನಾವಣೆ ಇನ್ನೂ ಮೂರು ತಿಂಗಳು ಇರುವಾಗ ಯಾವ ಫೈಲ್ ತೆಗೆಯುತ್ತಾರೆ. ಇಷ್ಟು ದಿನ ಮಲಗಿದ್ದೇನಪಾ ಕಟೀಲ್ ಸಾಹೇಬಾ… ಎಂದು ವಾಗ್ದಾಳಿ ಮುಂದುವರಿಸಿದ ಅವರು ಹೊಸ ಸರ್ಕಾರ ರಚನೆಗೊಂಡ ನಂತರ ಬೊಮ್ಮಾಯಿ ಸರ್ಕಾರದ ಶೇ. 80ರಷ್ಟು ಮಂತ್ರಿಗಳು ಜೈಲಿಗೆ ತೆರಳುತ್ತಾರೆ ಎಂದು ದೂರಿದರು.