ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲೂ ಕೆಲವು ವಿಡಿಯೋಗಳನ್ನು ನೋಡಿದರಂತೂ ಬಿದ್ದು ಬಿದ್ದು ನಗುವುದು ಗ್ಯಾರಂಟಿ. ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೀವು ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಯೋಗಾಸನ ಮಾಡುವುದನ್ನು ಕಾಣಬಹುದು.
ನೀಲಿ ಅಂಗಿ ಬಿಳಿ ಪಂಚೆ ತೊಟ್ಟ ಈ ಆಸಾಮಿ ನಡುಬೀದಿಯಲ್ಲೇ ಯೋಗ ಪ್ರದರ್ಶನ ಮಾಡಿದ್ದಾನೆ. ಮಳೆ ಬಂದು ನಿಂತಂತಿರುವ ರಸ್ತೆಯಲ್ಲಿ ಪಂಚೆ ಮೇಲೆ ಕಟ್ಟಿ ತೂರಾಡುತ್ತಲೇ ಯೋಗ ಮಾಡಿದ್ದಾನೆ. ಅದ್ಯಾವ ಆಸನ ಮಾಡುತ್ತಾನೋ ಆ ದೇವರೆ ಬಲ್ಲ. ಅವನ ಜೊತೆ ಇರುವ ಮತ್ತೊಬ್ಬ ವ್ಯಕ್ತಿ ಕೂಡ ಕುಡಿದ ಮತ್ತಿನಲ್ಲೇ ತೂರಾಡುತ್ತಿರುವುದನ್ನು ಕಾಣಬಹುದು.