ಧರ್ಮವ್ಯಾಧ ಮಹಾಭಾರತದಲ್ಲಿ ಬರುವಂತಹ ಒಂದು ಕಥೆ. ಒಬ್ಬ ಮಾಂಸವನ್ನು ವ್ಯಾಪಾರ ಮಾಡುವಂತಹ ವ್ಯಾಪಾರಿ. ಅವನಿಗೆ ದಿವ್ಯ ದೃಷ್ಟಿ ಇತ್ತು. ಜಾಬಾಲಿ ಎಂಬ ಋಷಿ ಮಹತಪಸ್ವಿ. ತಪಸ್ಸು ಮಾಡುತ್ತಾರೆ. ಅವನ ತಲೆ ಮೇಲೆ ಗಿಡದ ರೆಂಬೆ ಮೇಲೆ ಕುಳಿತ ಪಕ್ಷಿಗಳು ಋಷಿಗಳ ತಲೆ ಮೇಲೆ ಹೊಲಸು ಮಾಡುತ್ತವೆ. ಅವರೊಮ್ಮೆ ಕೋಪದಿಂದ ಮೇಲೆ ಕುಳಿತ ಪಕ್ಷಿಗಳನ್ನು ನೋಡಿದರು. ತನ್ನ ಜಪ ಅನುಷ್ಠಾನಗಳಿಂದ ಯೋಗ ಸಾಮರ್ಥ್ಯದಿಂದ ತಪಶಕ್ತಿಯಿಂದ ಋಷಿ ಕ್ರೋಧಾಗ್ನಿಗೆ ಆ ಪಕ್ಷಿಗಳು ಸುಟ್ಟುಹೋದವು.
ಇನ್ನೂ ತನಗೆ ಸಾಧನೆ ಸಿದ್ದಿಯಾಗಿದೆ ಅಂದುಕೊಂಡರು. ಇನ್ನೂ ತನ್ನ ತಪಸ್ಸು ಪೂರ್ಣವಾಗಿದೆ ನಾನಿನ್ನು ಮನೆಗೆ ಹೋಗಬಹುದು ಎಂದುಕೊಂಡು ಹೊರಟರು. ಮನೆಗೆ ಅತಿಥಿಗಳನ್ನು ಕರೆದು ಆತಿಥ್ಯ ಮಾಡುತ್ತಿದ್ದರು. ನಾವು ಕರೆದಾಗ ಬರುವವರು ಅಭ್ಯಾಗತರು.. ನಾವು ಕರೆಯದೆ ಬರುವವರು ಅತಿಥಿಗಳು. ಋಷಿಗಳು ಭವತಿ ಭಿಕ್ಷಾಂದೇಹಿ ಎನ್ನುತ್ತಾ ಒಬ್ಬ ಗೃಹಸ್ಥರ ಮನೆ ಮುಂದೆ ನಿಂತು ಆಹಾರಕ್ಕಾಗಿ ಕೂಗುತ್ತಾರೆ.
ಹೊರಗಡೆ ಬಂದ ಆ ಮನೆಯ ಮುತ್ತೈದೆೆ, ತನ್ನ ಪತಿದೇವ ಈಗ ತಾನೆ ಬಂದಿದ್ದಾರೆ ಅವರಿಗೆ, ಕಾರು ತೊಳೆಯಲು ನೀರು ಕೊಟ್ಟು ಬಂದು ನಿಮಗೆ ಆಹಾರ ಕೊಡುತ್ತೇನೆ ಎಂದಳು. ಆ ಮುತ್ತೈದೆೆಯ ಇನ್ನೊಮ್ಮೆ ಕೋಪದಿಂದ ಆ ಋಷಿಗಳು ನೋಡಿದಾಗ, ತಾವಲ್ಲಿ ಎರಡು ಪಕ್ಷಿಗಳನ್ನು ಸುಟ್ಟು ಬಂದಂತೆ ನಿಮ್ಮನ್ನು ಕೋಪದಿಂದ ನೋಡಿದರೆ ನಾ ನಿನ್ನ ಸುಟ್ಟು ಹೋಗುವುದಿಲ್ಲ, ನಾನಿಲ್ಲಿ ಪ್ರತಿವ್ರತ ಸ್ತ್ರೀ ಪತಿ ಸೇವೆ ಮೊದಲು ನನ್ನ ಧರ್ಮ ಅದನ್ನು ನಾನು ಪಾಲಿಸಿ, ಬಂದು ಹೊರಗೆ ಬಂದು ನಿಮಗೆ ಆಹಾರವನ್ನು ಕೊಡುವೆ ಎಂದಳು. ನಾನು ಕಾಡಿನಲ್ಲಿ ಪಕ್ಷಿಗಳನ್ನು ಸುಟ್ಟು ಬಂದದ್ದು ಈ ಗೃಹಿಣಿಗೆ ಹೇಗೆ ಗೊತ್ತಾಯ್ತು ಹಾಗಾದರೆ ತನ್ನ ತಪಸ್ಸಿಗಿಂತ ಈ ಮುತ್ತೈದೆಯ ತಪಸ್ಸು ದೊಡ್ಡದಾಯಿತಲ್ಲ ಎಂದು ಋಷಿಗೆ ಯೋಚನೆ ಆಯ್ತು.
ಪತಿಯಲ್ಲಿ ಸಾಕ್ಷಾತ್ ನಾರಾಯಣ ಸನ್ನಿಧಾನ ಇದೆ. ಎಂದು ನನ್ನ ಕರ್ತವ್ಯವನ್ನು ಮನಸಾರೆ ಮಾಡುತ್ತಿರುವೆ ಸಹಜವಾಗಿಯೇ ನನ್ನಲ್ಲಿ ಲಕ್ಷ್ಮಿ ಸನ್ನಿಧಾನವಿದೆ. ನನ್ನಲ್ಲಿರುವ ಲಕ್ಷ್ಮಿ ಸನ್ನಿಧಾನದ ಮೂಲಕ ನಾರಾಯಣರು ಸೇವೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದೇ ನಾನು ಮಾಡುತ್ತಿರುವ ತಪಸ್ಸು.
ಇದನ್ನೇ ನಾನು ಅಚ್ಚುಕಟ್ಟಾಗಿ ಮಾಡಿದ್ದಕ್ಕೆ ನನ್ನ ತಪಶಕ್ತಿ ಬೆಳೆದಿದೆ. ಯಾರು ಏನು ಮಾಡುತ್ತಾರೆ ಎಂಬುದನ್ನು ಕುಳಿತಲ್ಲೇ ನಾನು ದೃಷ್ಟಿಯಿಂದ ಹೇಳಬಹುದು. ನಿಮ್ಮಲ್ಲಿರುವ ಅಹಂಕಾರವನ್ನು ತೊರೆದು ಜ್ಞಾನವನ್ನು ಪಡೆಯಬೇಕೆಂಬ ಉದ್ದೇಶದಿಂದ ಅತ್ಯಂತ ನಿರಹಂಕಾರಿಯಾಗಿ ನ್ಯಾಯದಿಂದ ಧರ್ಮನುಷ್ಠಾನ ಮಾಡು ನ್ಯಾಯಸಿದ್ದಿಯನ್ನು ಪಡೆದುಕೊಳ್ಳುತ್ತೀಯಾ. ಒಳ್ಳೆಯ ಜ್ಞಾನದ ಅಭಿವೃದ್ಧಿ ಆಗುತ್ತದೆ ಎಂದು ಹೇಳಿ ಕಳಿಸುತ್ತಾಳೆ.