ಒಗ್ಗಟ್ಟಿನಿಂದ ಕಾಂಗ್ರೆಸ್ ಗೆಲುವು ನಿಶ್ಚಿತ

Advertisement

ಬಾಗಲಕೋಟೆ: ತೇರದಾಳ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯನ್ನಾಗಿ ಯುವಕರಿಗೆ ಸ್ಥಾನ-ಮಾನ ಕೊಟ್ಟಿರುವ ಹೈಕಮಾಂಡ್‌ನ ವಿಶ್ವಾಸವನ್ನು ಉಳಿಸಿಕೊಂಡು ಈ ಬಾರಿ ಎಲ್ಲರ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತವೆಂದು ಅಭ್ಯರ್ಥಿ ಸಿದ್ದು ಕೊಣ್ಣೂರ ತಿಳಿಸಿದರು.
ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರಾದ್ಯಂತ ಕಾಂಗ್ರೆಸ್ ಅಲೆಯಿದ್ದು, ನಾವೆಲ್ಲರೂ ಒಂದಾಗಿ ಅಭ್ಯರ್ಥಿಯಾಕಾಂಕ್ಷಿಯಲ್ಲಿದ್ದ ತಾರತಮ್ಯವನ್ನು ಹೈಕಮಾಂಡ್ ವರಿಷ್ಠರು ಶಮನ ಮಾಡಿದ್ದಾರೆ. ಈಗೇನಿದ್ದರೂ ಚುನಾವಣೆ ಅಖಾಡದಲ್ಲಿ ಶಕ್ತಿ ಪ್ರದರ್ಶನ ಮಾತ್ರ ಬಾಕಿಯಿದ್ದು, ಆಡಳಿತಾರೂಢ ಬಿಜೆಪಿಯ ಭ್ರಷ್ಟಾಚಾರ ಹಾಗು ಸ್ವಜನ ಪಕ್ಷಪಾತಕ್ಕೆ ಕಡಿವಾಣ ಹಾಕಿ ಜನರ ನೆಮ್ಮದಿಗೆ ಕಾರಣವಾಗಬೇಕಾದರೆ ಕಾಂಗ್ರೆಸ್ ಗೆಲ್ಲಿಸಬೇಕೆಂದು ಕೊಣ್ಣೂರ ತಿಳಿಸಿದರು.
ಮಾಜಿ ಸಚಿವೆ ಉಮಾಶ್ರೀ, ಲಕ್ಷ್ಮಣ ದೇಸಾರಟ್ಟಿ, ಶಂಕರ ಆಲಕನೂರ, ಕಾಶಿನಾಥ ಹುಡೇದ, ಬರಮು ಉಳ್ಳಾಗಡ್ಡಿ, ಮಾರುತಿ ಸೊರಗಾಂವಿ, ಶಂಕರ ಕೆಸರಗೊಪ್ಪ ಸೇರಿದಂತೆ ಅನೇಕರಿದ್ದರು