ಚೆನ್ನೈ: ದೇವಸ್ಥಾನವೊಂದರ ಹರಾಜಿನಲ್ಲಿ ಈ ಲಿಂಬೆ 35,000 ರೂ. ಮಾರಾಟವಾಗಿ ಗಮನ ಸೆಳೆದಿದೆ. ಈರೋಡ್‌ನ ಗ್ರಾಮವೊಂದರ ದೇವಸ್ಥಾನದಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದೆ.ಈರೋಡ್‌ನಿಂದ 35 ಕಿ.ಮೀ. ದೂರದಲ್ಲಿರುವ ಶಿವಗಿರಿ ಗ್ರಾಮದ ಬಳಿಯ ಪಳಪೂಸಾಯನ್ ಶಿವ ದೇವಸ್ಥಾನದಲ್ಲಿ ಹರಾಜು ಪ್ರಕ್ರಿಯೆಯನ್ನು ಅಯೋಜಿಸಲಾಗಿತ್ತು. ಮಹಾ ಶಿವರಾತ್ರಿಯಂದು ಶಿವನಿಗೆ ಅರ್ಪಿಸಿದ ಲಿಂಬೆ, ಹಣ್ಣುಗಳು ಸೇರಿದಂತೆ ಇತರ ವಸ್ತುಗಳನ್ನು ಹರಾಜು ಹಾಕಲಾಯಿತು.ʼಹರಾಜಿನಲ್ಲಿ 15 ಭಕ್ತರು ಭಾಗವಹಿಸಿದ್ದರು ಮತ್ತು ಈ ವೇಳೆ ಈರೋಡ್‌ನ ಭಕ್ತರೊಬ್ಬರಿಗೆ ಲಿಂಬೆ ಹಣ್ಣನ್ನು 35,000 ರೂ.ಗೆ ಮಾರಾಟ ಮಾಡಲಾಗಿದೆʼʼ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ದೇವಾಲಯದ ಅರ್ಚಕರು ಹರಾಜು ಮಾಡಿದ ಲಿಂಬೆ ಹಣ್ಣನ್ನು ಪ್ರಧಾನ ದೇವರ ಮುಂದೆ ಇರಿಸಿ ಪೂಜೆ ನೆರವೇರಿಸಿ ನೂರಾರು ಭಕ್ತರ ಸಮ್ಮುಖದಲ್ಲಿ ಅತಿ ಹೆಚ್ಚು ಬಿಡ್ ಮಾಡಿದ ವ್ಯಕ್ತಿಗೆ ಹಸ್ತಾಂತರಿಸಿದರು.ಯಾರು ಅತಿ ಹೆಚ್ಚು ಬಿಡ್ ಮಾಡಿ ಲಿಂಬೆ ಹಣ್ಣನ್ನು ಪಡೆಯುತ್ತಾರೋ ಅವರ ಸಂಪತ್ತು ಮುಂಬರುವ ವರ್ಷಗಳಲ್ಲಿ ವೃದ್ಧಿಸುತ್ತದೆ ಮತ್ತು ಉತ್ತಮ ಆರೋಗ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.