ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ಮೇಲೆ ಬುಧವಾರ ಒಂದೇ ದಿನ 1,012 ಪ್ರಕರಣಗಳನ್ನು ದಾಖಲಿಸಿ 4,88,500 ರೂ ದಂಡ ಹಾಕಲಾಗಿದೆ ಎಂದು ಹುಬ್ಬಳ್ಳಿ – ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ರಮಣ ಗುಪ್ತ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು,ಹುಬ್ಬಳ್ಳಿಯ ಮೂರು ಸಂಚಾರ ಠಾಣೆ ಹಾಗೂ ಧಾರವಾಡದ ಒಂದು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಏಕ ಕಾಲಕ್ಕೆ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.