ಹೈದರಾಬಾದ್: ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತವನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡ ದಾಖಲಿಸಿದೆ. ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತು.
ಹೆನ್ರಿಚ್ ಕ್ಲಾಸೇನ್ 34 ಎಸೆತಗಳಲ್ಲಿ ಅಜೇಯ 80 ಹಾಗೂ ಟ್ರಾವಿಸ್ ಹೆಡ್ 24 ಎಸೆತಗಳಲ್ಲಿ 62, ಅಭಿಷೇಕ ಶರ್ಮಾ 23ಎಸೆತಗಳಲ್ಲಿ 63 ರನ್‌ಗಳ ಕಾಣಿಕೆ ನೀಡಿದರು.