ಐಪಿಎಲ್‌ಗೆ ದಿನೇಶ್ ಕಾರ್ತಿಕ್ ವಿದಾಯ!

Advertisement

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ವಿದಾಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಜಿಯೋ ಸಿನಿಮಾ ಪೋಸ್ಟ್‌ ಮಾಡಿದ್ದಾರೆ, ಆದರೆ ನಿವೃತ್ತಿ ಕುರಿತಂತೆ ದಿನೇಶ್ ಕಾರ್ತಿಕ್ ಅಧಿಕೃತವಾಗಿ ಘೋಷಣೆ ಮಾಡಿಲ್ಲ. 17 ವರ್ಷಗಳ ಐಪಿಎಲ್​ ಕೆರಿಯರ್​ನಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳ ಪರ ಕಣಕ್ಕಿಳಿದಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 257 ಪಂದ್ಯಗಳನ್ನಾಡಿದ್ದು ದಿನೇಶ್ ಕಾರ್ತಿಕ್ 22 ಅರ್ಧಶತಕಗಳೊಂದಿಗೆ ಒಟ್ಟು 4842 ರನ್ ಕಲೆಹಾಕಿದ್ದಾರೆ. ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಈ ಎಲ್ಲಾ ದಾಖಲೆಗಳೊಂದಿಗೆ ಇದೀಗ ಡಿಕೆ ಐಪಿಎಲ್​ಗೆ ವಿದಾಯ ಹೇಳಿದ್ದಾರೆ. ತಮ್ಮ ವಿಕೆಟ್ ಕೀಪಿಂಗ್​ ಗ್ಲೋಸ್​​ ತೆಗೆದು ಪ್ರೇಕ್ಷಕರತ್ತ ಕೈಬೀಸಿದ ಧನ್ಯವಾದ ಅರ್ಪಿಸಿದ ದಿನೇಶ್​ ಕಾರ್ತಿಕ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಂದ ಭಾವನಾತ್ಮಕ ಗೌರವ ಪಡೆದರು. ಡಿಕೆ ತೀವ್ರ ಭಾವುಕರಾಗಿದ್ದು ಅಧಿಕೃತವಾಗಿ ಘೋಷಣೆ ಮಾಡಿಲ್ಲ.