ಶಿರೂರು/ಬಾಗಲಕೋಟೆ: ಜವಾರಿ ಬಾಗಲಕೋಟೆ ಫೇಸ್ಬುಕ್ ಪೇಜ್ ಮತ್ತು ಶಿರೂರು ಗ್ರಾಮದ ಹಿರಿಯರ ಸಂಯೋಗದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಭಾರತ ಮಾತೆಯ ಫೋಟೋಗೆ ಮತ್ತು ಧ್ವಜಸ್ತಂಬಕ್ಕೆ ಪೂಜೆ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇಂದು ಆಗಸ್ಟ್ ೧೩ರಂದು ಬಾಗಲಕೋಟ ಪಟ್ಟಣದ ಐತಿಹಾಸಿಕ ಸ್ಥಳವಾದ ಶಿರೂರು ಅಗಸೆಯ ಮೇಲೆ ಜವಾರಿ ಬಾಗಲಕೋಟ ಫೇಸ್ಬುಕ್ ಪೇಜ್ ತಂಡದ ಸದಸ್ಯರು ಮತ್ತು ಶಿರೂರು ಗ್ರಾಮದ ಹಿರಿಯರು, ಬೇವಿನಮಟ್ಟಿ, ಮಲ್ಲಾಪುರ, ಹೊನ್ನಾಕಟ್ಟಿ ಯುವಕರ ಸಂಯೋಗದೊಂದಿಗೆ ಇಂದು ಧ್ವಜಾರೋಹಣವನ್ನು ನೆರವೇರಿಸಲಾಯಿತು.
ಅತಿಥಿಯಾಗಿ ಶಿರೂರು ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಐ.ಜಿ ಕೊನ್ನೂರ್ ಅವರ ಅಧ್ಯಕ್ಷತೆಯಲ್ಲಿ ಮತ್ತು ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ ಶಿರೂರು ಪಟ್ಟಣದ ನಾಲ್ಕು ಮಾಜಿ ಸೈನಿಕರಿಂದ ಧ್ವಜಾರೋಹಣ ಮಾಡಲಾಯಿತು. ನಂತರ ಮಾಜಿ ಸೈನಿಕರಾದ ಶಿವನಗೌಡ ಪಾಟೀಲ, ರಂಗಪ್ಪ ತಳಗಿಹಾಳ, ಮಾನಪ್ಪ ಆಡಿನ್, ಮತ್ತು ಭೀಮಪ್ಪ ಕಿಚಡಿ ಅವರನ್ನು ಜವಾರಿ ಬಾಗಲಕೋಟೆ ತಂಡದಿಂದ ಸನ್ಮಾನಿಸಲಾಯಿತು.
ಶಿರೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ರವಿ ಗಿರಿಜಾ ಮತ್ತು ರಂಗಪ್ಪ ಮಳ್ಳಿ ಹಾಗೂ ಫೇಸ್ಬುಕ್ ಪೇಜ್ ತಂಡದ ಅಡ್ಮಿನ್ ಸಂತೋಷ್ ಹೊಸೂರ್, ದಯಾನಂದ ನಾಯಕ್, ರಾಘವೇಂದ್ರ ಯಾದಗಿರಿ, ಆನಂದ ಬೆಲ್ಲದ, ಮಾರುತಿ ನಲವಾಡೆ ಮಲ್ಲಯ್ಯ ಮುಪ್ಪಿನವರ್, ಗಿರೀಶ್ ಎಲಿ, ನಾಗರಾಜ್ ಬಾರಕೇರ, ರವಿ ಲಾಗಲೊಟಿ, ಶಶಿ ಗಾಳಿ ಹಾಗೂ ಕನ್ನಡಿಗರ ಶಿರೂರು ಗ್ರಾಮಸ್ಥರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.