ಸವಣೂರ: ಪುರಸಭೆಯಲ್ಲಿ ಲಂಚ ಬೇಡಿಕೆಯಿಟ್ಟ ಅಧಿಕಾರಿಗಳಿಗೆ ರೈತನೊಬ್ಬ ಎತ್ತು ನೀಡಲು ಮುಂದಾಗಿ ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ಮಾಸುವ ಮುನ್ನವೇ ಸಿಎಂ ತವರು ಕ್ಷೇತ್ರದಲ್ಲಿ ಮತ್ತೊಂದು ಲಂಚದ ಪ್ರಕರಣ ನಡೆದಿದೆ.
ಉಪವಿಭಾಗಾಧಿಕಾರಿಗಳ ಕೋರ್ಟಿನಲ್ಲಿದ್ದ ಜಮೀನಿನ ವ್ಯಾಜ್ಯದ ಆದೇಶ ಪ್ರತಿ ನೀಡಲು ಕಚೇರಿಯ ಪ್ರಥಮ ದರ್ಜೆ ಸಹಾಯಕ ತೇಜಸ್ವಿಕುಮಾರ ನೆಗಳೂರು ಎಂಬಾತ ರೈತನ ಬಳಿ 15 ಸಾವಿರ ರೂ. ಲಂಚದ ಬೇಡಿಕೆಯಿಟ್ಟು, 10 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಸೋಮವಾರ ನಡೆದಿದೆ.
ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ಸೋಮವಾರ ರೈತ ಗುಡ್ಡಪ್ಪ ನಿಂಗಪ್ಪ ದೊಡ್ಡಮನಿ ಅವರಿಂದ ೧೦ ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ತೇಜಸ್ವಿಕುಮಾರನನ್ನು ಸಾಕ್ಷಿ ಸಮೇತ ಬಂಧಿಸಿದೆ.