ಕಲಬುರಗಿ: ತಂಪಾದ ವಾತಾವರಣದಲ್ಲಿ ಇಂಪಾದ ಸಂಗೀತ, ವಚನ ಸುಧೆ ಎಲ್ಲರನ್ನೂ ತಲೆತೂಗಿಸುವಂತೆ ಮಾಡಿತು. ದೇಶಿ ಆಹಾರ ಸವಿದು ತಲೆಗೊಂದಿಷ್ಟು ಜ್ಞಾನ ನೀಡಿತು.
ಹೌದು. ನಗರ ಹೊರವಲಯದ ನಂದಿಕೂರ ಗ್ರಾಮದಲ್ಲಿ ಶುಕ್ರವಾರ ಬಸವ ಕೇಂದ್ರದ ಕೋಶಾಧ್ಯಕ್ಚ ಸೋಮಣ್ಣ ನಡಕಟ್ಟಿ ಅವರ ತೋಟದಲ್ಲಿ ಎಳ್ಳ ಅಮಾವಾಸ್ಯೆ ಅತ್ಯಂತ ವಿಶಿಷ್ಟವಾಗಿ ಅಚರಿಸಲಾಯಿತು. ಬಸವ ಕೇಂದ್ರದಿಂದ ಶರಣ ಒಕ್ಕಲಿಗ ಮುದ್ದಣ್ಣ ಸ್ಮರಣೋತ್ಸವ ಅಂಗವಾಗಿ ಶಹಾಬಾದ್(ಭಂಕೂರ) ಬಸವ ಭಜನಾ ಮಂಡಳಿಯಿಂದ ಆಕರ್ಷಕ ವಚನ ಭಜನೆ ಜತೆ ಭೋಜನ ಸವಿದು ಭೂತಾಯಿಯನ್ನು ಆರಾಧಿಸಲಾಯಿತು. ಜಾಗತಿಕ ಲಿಂಗಾಯತರು ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಜೆಸ್ಕಾಂ ನಿವೃತ್ತ ಇಂಜಿನಿಯರ್ ಮಲ್ಲಿಕಾರ್ಜುನ ಕರ್ಪೂರ ಹಾಗೂ ಅನೇಕರು ಇದ್ದರು.