ಎನ್‌ಟಿಪಿಸಿ ಅಧಿಕಾರಿಗಳಿಂದ ಸಮೀಕ್ಷೆ

ಸಮೀಕ್ಷೆ
ಕೂಡಗಿ ಎನ್.ಟಿ.ಪಿ.ಸಿ ಕೆರೆಗಳಿಂದ ರೈತರ ಜಮೀನುಗಳಿಗೆ ಹಾನಿಯಾಗುತ್ತಿರುವದನ್ನು ಕೊಲ್ಹಾರ ತಹಶೀಲ್ದಾರ, ಎನ್‌ಟಿಪಿಸಿ ಎಚ್.ಆರ್ ಅಧಿಕಾರಿ, ಮಾಜಿ ಸಚಿವ ಬೆಳ್ಳುಬ್ಬಿ ರೈತರೊಂದಿಗೆ ಸಮೀಕ್ಷೆ ನಡೆಸಿದರು.
Advertisement

ಕೊಲ್ಹಾರ: ಕೂಡಗಿ ಎನ್.ಟಿ.ಪಿ.ಸಿ ಕೆರೆಗಳಿಂದ ರೈತರ ಜಮೀನುಗಳಿಗೆ ಹಾನಿಯಾಗುತ್ತಿರುವದನ್ನು ಕೊಲ್ಹಾರ ತಹಶೀಲ್ದಾರ ಪಿ.ಜಿ. ಪವಾರ, ಎನ್.ಟಿ.ಪಿ.ಸಿ ಎಚ್.ಆರ್. ಅಧಿಕಾರಿ ಮಂಜುನಾಥ ಅವರು ಎಷ್ಟು ಜಮೀನುಗಳಲ್ಲಿ ಹಾನಿಯಾಗುತ್ತದೆ ಎನ್ನುವದನ್ನು ಪರಿಶೀಲನೆ ಮಾಡಲು ಮಸೂತಿ ಗ್ರಾಮದ ರೈತರ ಹೊಲಗಳಿಗೆ ಮಂಗಳವಾರ ಭೇಟಿ ನೀಡಿ ಸರ್ವೇ ಮಾಡಿದರು.
ಎನ್.ಟಿ.ಪಿ.ಸಿ ಅಧಿಕಾರಿಗಳ ಸಮೀಕ್ಷೆ ಪ್ರಕಾರ ೪೦ ಎಕರೆ ಜಮೀನು ಮಾತ್ರ ಜವಳು ಪ್ರದೇಶವಿದ್ದು ಕಂದಾಯ ಇಲಾಖೆಯ ಸರ್ವೇ ಪ್ರಕಾರ ೩೭೦ ಎಕರೆ ಪ್ರದೇಶ ಜವಳು ಭೂಮಿಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಇಂತಹ ಸಮಸ್ಯೆಯನ್ನು ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ನ್ಯಾಯದೊರಕಿಸಿಕೊಡಲು ಪ್ರಯತ್ನಿಸುತ್ತೇನೆ ಎಂದು ಎನ್.ಟಿ.ಪಿ.ಸಿ ಅಧಿಕಾರಿ ಮಂಜುನಾಥ ಭರವಸೆ ನೀಡಿದರು.

 ಸಮೀಕ್ಷೆ
ಕೂಡಗಿ ಎನ್.ಟಿ.ಪಿ.ಸಿ ಕೆರೆಗಳಿಂದ ರೈತರ ಜಮೀನುಗಳಿಗೆ ಹಾನಿಯಾಗುತ್ತಿರುವದನ್ನು ಕೊಲ್ಹಾರ ತಹಶೀಲ್ದಾರ, ಎನ್‌ಟಿಪಿಸಿ ಎಚ್.ಆರ್ ಅಧಿಕಾರಿ, ಮಾಜಿ ಸಚಿವ ಬೆಳ್ಳುಬ್ಬಿ ರೈತರೊಂದಿಗೆ ಸಮೀಕ್ಷೆ ನಡೆಸಿದರು.