ಗಂಗಾವತಿ: ನಗರದಲ್ಲಿ ಎನ್‌ಐಎ ತಂಡ ದಾಳಿ-ನಡೆಸಿ ಪಿಎಫ್‌ಐ ಕೊಪ್ಪಳ ಜಿಲ್ಲಾಧ್ಯಕ್ಷನನ್ನು ಇಂದು ಬೆಳಗಿನ ಜಾವ ಇಲ್ಲಿ ಬಂಧಿಸಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮನವಿ ಹಿನ್ನೆಲೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ನೇತೃತ್ವದ ತಂಡದ ಅಧಿಕಾರಿಗಳು, ಪೊಲೀಸರು ಪಿಎಫ್ಐ ಜಿಲ್ಲಾಧ್ಯಕ್ಷ ಅಬ್ದುಲ್ ಫೈಯಾಜ್‌ನನ್ನು ವಶಕ್ಕೆ ಪಡೆದಿದ್ದಾರೆ. ಗಂಗಾವತಿ ನಗರದಲ್ಲಿನ ಆತನ ಮನೆಯಲ್ಲಿ ಬೆಳಗ್ಗೆ 3 ಗಂಟೆ ಸುಮಾರಿಗೆ ಪೊಲೀಸರು ಅಬ್ದುಲ್ ಫೈಜಾಜ್‌ನನ್ನು ಬಂಧಿಸಿದ್ದಾರೆ. ಬಂಧನದ ನಂತರ ಅಬ್ದುಲ್ ಫೈಯಾಜ್‌ನನ್ನು ಗಂಗಾವತಿಯಿಂದ ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ನಗರದಲ್ಲಿ ಒಂದು ವರ್ಷದಿಂದ ಸಂಘಟನೆ ಕಾರ್ಯ ಚಟುವಟಿಕೆ ಮಾಡುತ್ತಿದ್ದು, ಪ್ರಾರ್ಥನಾ(ಮಸಿದಿ) ಮಂದಿರದಲ್ಲಿ ಕಚೇರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪೋಲಿಸರು ದಾಳಿ ನಡೆಸಿ ಯಾವುದೇ ವಿಚಾರವನ್ನು ತನಿಖೆಗೆ ಒಳಪಡಿಸದೇ ಮಾಹಿತಿ ನೀಡಲು ಆಗುವುದಿಲ್ಲ ಎಂದು ತಿಳಿಸಿದರು.
ಪೋಲಿಸ್ ಉಪವಿಭಾಗಾಧಿಕಾರಿ ರುದ್ರೇಶ ಉಜ್ಜನಕೊಪ್ಪ, ಪಿಐ ವೆಂಕಟಸ್ವಾಮಿ, ಗ್ರಾಮಿಣ ಸಿಪಿಐ ಮಂಜುನಾಥ ಪಾಲ್ಗೊಂಡಿದ್ದರು.