ಎಡಬಿಡದೇ ಪ್ರಯತ್ನ: ನಿಲ್ಲದ ಕಾರ್ಯಾಚರಣೆ

Advertisement

ವಿಜಯಪುರ: ಮಗು ಸಾತ್ವಿಕ್ ಜೀವಂತ ಇದ್ದು, ಉಳಿಸಿಕೊಳ್ಳಲು ಒಟ್ಟು ೫೦೦ ಸಿಬ್ಬಂದಿಯೊಡಗೂಡಿ ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಲಾಗುತಿದೆ.
ಹಗ್ಗ ಬಿಟ್ಟು ಮಗುವಿನ ಕಾಲಿಗೆ ಕಟ್ಟಿ ಮೇಲೇತ್ತುವ ಪ್ರಯತ್ನ ಮಾಡಲಾಗ್ಗುತ್ತಿದ್ದರೆ, ಇನ್ನೊಂದೆಡೆ ಬೋರ್ವೆಲ್ ಪಕ್ಕದಲ್ಲಿ ೪ ಪೂಟ್ ಅಂತರದಲ್ಲಿ ೪ ಜೆಸಿಬಿ, ೧ ಇಟ್ಯಾಚ್, ೪ ಟ್ರ‍್ಯಾಕ್ಟರ್ ಬಳಸಿ ಬೋರ್ವೆಲ್ ಗೆ ಸಮನಾಂತರದಲ್ಲಿ ತೆಗ್ಗು ತೊಡಲಾಗುತ್ತಿದೆ. ಬಾರಿ ಗಾತ್ರದ ಬಂಡೆ ಹತ್ತಿದ್ದರಿಂದ ಬ್ರೇಕರ್ ಬಳಸಿ ಕಲ್ಲುಪುಡಿ ಮಾಡಲಾಗುತ್ತಿದೆ.
ಕೊಳವೆ ಬಾವಿ ಪಕ್ಕದಲ್ಲಿಯೇ ೨೨ ಪೂಟ್ ವರೆಗೂ ತೆಗ್ಗು ತೊಡಲಾಗುತ್ತದೆ. ಬೋರ್ವೆಲ್ ನಲ್ಲಿ ೧೮ ಪೂಟ್ ಆಳಕ್ಕೆ ಮಗು ಸಿಲುಕಿಕೊಂಡಿದ್ದು, ಜೆಸಿಬಿ ಹಾಗೂ ಇಟ್ಯಾಚ್ ಯಂತ್ರದ ಮೂಲಕ ಬೋರ್ವೆಲ್ ಪಕ್ಕದಲ್ಲಿ ೫ ಪೂಟ್ ಅಂತರದಲ್ಲಿ ೨೨ ರಿಂದ ೨೫ ಪೂಟ್ ವರೆಗೂ ತೆಗ್ಗು ತೊಡಲಾಗುತ್ತಿದೆ. ಈಗಾಗಲೇ ೧೪ ಪೂಟ್ ತೆಗ್ಗು ಪೂರ್ಣವಾಗಿದೆ.
ಲಾಚ್ಯಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಚೈತ್ರ ಭಜಂತ್ರಿ ಮಗು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಆಕ್ಸಿಜನ್ ವ್ಯವಸ್ಥೆ ಮಾಡಿ ತಾಲೂಕ ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿಯೇ ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಸೋನಾವಣೆ, ಜಿಲ್ಲಾ ಪಂಚಾಯತ್ ಸಿಇಓ ರಿಷಿ ಆನಂದ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಪುತ್ರ ವಿಠ್ಠಲಗೌಡ ಪಾಟೀಲ, ತಹಶೀಲ್ದಾರ್ ಮಂಜುಳಾ ನಾಯಕ, ತಾಲೂಕ ಆರೋಗ್ಯ ಅಧಿಕಾರಿ ಅರ್ಚನಾ ಕುಲಕರ್ಣಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾತ್ರಿ ೨ ಗಂಟೆ ವರೆಗೂ ಕಾರ್ಯಾಚರಣೆ ಮುಕ್ತಾಯವಾಗುತ್ತದೆ ಎಂದು ಹೇಳಲಾಗುತ್ತಿದೆ.

ನಾನು ಇಂದು ಬೇರೆ ಕಡೆ ಇದ್ದೆ, ಸುದ್ದಿ ತಿಳಿದ ತಕ್ಷಣೆವೇ ಸ್ಥಳಕ್ಕೆ ಧಾವಿಸುತ್ತಿದ್ದೇನೆ. ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕೊಳವೆ ಬಾವಿಗೆ ಬಿದ್ದ ಮಗು ಮತ್ತೆ ಬದುಕಿ ಬರಲಿ ಎಂದು ದೇವರಲ್ಲಿಯೂ ಪ್ರಾರ್ಥಿಸುತ್ತೇನೆ.

ಯಶವಂತ್ರಾಯಗೌಡ ಪಾಟೀಲ ಇಂಡಿ ಶಾಸಕ