ಎಚ್ಚರ..! ಮೊಬೈಲ್‌ನಲ್ಲಿ ಲೆಕ್ಕಾಚಾರ ತಪ್ಪಬಹದು

Advertisement

ಬೆಂಗಳೂರು: ಸೆಪ್ಟೆಂಬರ್ 15 ಅನ್ನು ಎಂಜಿನಿಯರ್‌ಗಳ ದಿನವೆಂದು ಆಚರಿಸಲಾಗುತ್ತದೆ. ಈ ದಿನದ ಆಚರಣೆಯಲ್ಲಿ ಇರುವಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಸದ್ದು ಮಾಡುತ್ತಿದೆ. ಅದುವೇ “ಎಚ್ಚರ..! ಮೊಬೈಲ್‌ನಲ್ಲಿ ಲೆಕ್ಕಾಚಾರ ತಪ್ಪಬಹದು” ಎಂದು 4 ಸಂಖ್ಯೆಗೆ 4ನ್ನು ಕೂಡಿಸಿ ನಂತರ 4 ರಿಂದ ಭಾಗಿಸಿದಾಗ (4+4/4= ?) ಬರುವ ಉತ್ತರ ನೋಡಿ ಎಂದು ವಿಷಯವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದವರು ಮೊಬೈಲ್‌ ಹಾಗೂ ಕಂಪ್ಯೂಟರ್‌ನಲ್ಲಿ ಲೆಕ್ಕಾಚಾರ ಹಾಕತೊಡಗಿದ್ದಾರೆ. ಇದು ಮೊಬೈಲ್‌ ಲೆಕ್ಕದಲ್ಲಿ ಮಾತ್ರ ಗೊಂದಲ ಎಂದು ಕೆಲವರು ಕಮೆಂಟ್‌ ಮಾಡಿದ್ದರೆ. ಮತ್ತೊಬ್ಬರು ಗಣಿತದ ನಿಯಮಗಳನ್ನು ವಿವರಿಸಿ ಕಮೆಂಟ್‌ ಮಾಡಿದ್ದಾರೆ, ಅದೇನೆ ಇರಲಿ ಇಂದು ರಾಷ್ಟ್ರೀಯ ಅಭಿಯಂತರರ ದಿನ 1968 ರಲ್ಲಿ ಡಾ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಭಾರತ ಸರ್ಕಾರ ಎಂಜಿನಿಯರ್(ಅಭಿಯಂತರ) ದಿನ ಎಂದು ಘೋಷಣೆ ಮಾಡಿದ ನಂತರ ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನ ಆಚರಣೆ ಮಾಡಲಾಗುತ್ತಿದೆ. ವಿಶ್ವೇಶ್ವರಯ್ಯನವರು 15 ಸೆಪ್ಟೆಂಬರ್ 1860 ರಂದು ಜನಿಸಿದರು.
ವಿಶ್ವ ಕಂಡ ಮಹಾನ್‌ ಇಂಜಿನಿಯರ್‌, ಕನ್ನಂಬಾಡಿಯ ಶಿಲ್ಪಿ, ಭಾರತ ರತ್ನ ಸರ್.‌ಎಂ.ವಿಶ್ವೇಶ್ವರಯ್ಯ ಅವರ ಜಯಂತಿಯಂದು ಅನಂತ ನಮನಗಳನ್ನು ಸಲ್ಲಿಸುತ್ತಾ, ನಾಡಿನ ಸಮಸ್ತ ಅಭಿಯಂತರರಿಗೆ ರಾಷ್ಟ್ರೀಯ ಅಭಿಯಂತರರ ದಿನದ ಶುಭಾಶಯಗಳು.