ಉರಿಗೌಡ, ನಂಜೇಗೌಡ ಇವತ್ತು ನಿನ್ನೆಯಿಂದ ಪ್ರಾಮುಖ್ಯತೆ ಬಂದವರಲ್ಲ. ದಾಖಲೆ ಮುಂದಿಟ್ಟುಕೊಂಡು ಸ್ವಾಮೀಜಿ ಬಳಿ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಿಯಾದ ಸಂಶೋಧನೆ ಆಗದೆ ಇತಿಹಾಸದ ಬಗ್ಗೆ ಚರ್ಚಿಸೋದು ಸೂಕ್ತವಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ. ನಾವು ಖಂಡಿತ ದಾಖಲೆ ತೆಗೆದುಕೊಂಡು ಸ್ವಾಮೀಜಿ ಬಳಿ ಹೋಗುತ್ತೇವೆ. ಅವರಿಗೆ ವಾಸ್ತವಿಕ ಸತ್ಯವನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಚುನಾವಣೆ ಇರುವುದರಿಂದಾಗಿ ಈ ವಿಷಯ ಬೇರೆ ಬೇರೆ ತಿರುವು ಪಡೆಯುತ್ತಿದೆ. ಅದು ಬೇರೆ ತಿರುವು ಪಡೆಯಬಾರದು ಎನ್ನುವ ದೃಷ್ಟಿಯಿಂದ ಸ್ವಾಮೀಜಿ ಹೇಳಿದ್ದಾರೆ. ಅವರ ಮಾತನ್ನು ಗೌರವಿಸುತ್ತೇವೆ ಎಂದರು.