ಬೆಳಗಾವಿ: ಕೆಲ ಹೊತ್ತಿನಲ್ಲೇ ಬೆಳಗಾವಿಗೆ ಸಿಎಂ ಬೊಮ್ಮಾಯಿ ತೆರಳಲಿದ್ದು, ಉಮೇಶ್ ಕತ್ತಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.
ಸಂಜೆ 5 ಗಂಟೆ ನಂತರ ಅಂತ್ಯ ಸಂಸ್ಕಾರ ನಡೆಯಲಿದ್ದು, ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಿಎಂ ಬೊಮ್ಮಾಯಿ ತೆರಳಲಿದ್ದಾರೆ. ಅಲ್ಲಿಂದ ಬೆಲ್ಲದ ಬಾಗೇವಾಡಿಗೆ ಪ್ರಯಾಣ ಮಾಡುವ ಸಿಎಂ, ಸಂಜೆ ಉಮೇಶ್ ಕತ್ತಿ ಅಂತ್ಯಕ್ರಿಯೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಆನಂತರ ಬೆಂಗಳೂರಿಗೆ ವಾಪಸ್ ಆಗಲಿd್ದಾರೆ. ಸದ್ಯ ಗೃಹ ಕಚೇರಿ ಕೃಷ್ಣಾದಲ್ಲಿರುವ ಸಿಎಂ ಬೊಮ್ಮಾಯಿ, ಕೇಂದ್ರ ವಿಪತ್ತು ನಿರ್ವಹಣಾ ತಂಡದ ಜತೆ ಭೇಟಿಯಾಗಲಿದ್ದಾರೆ. ಆನಂತರ ಬೆಳಗಾವಿಗೆ ಪ್ರಯಾಣ ಮಾಡಲಿದ್ದಾರೆ.