ಉಪವಾಸದ ಮಹತ್ವ

ಗುರುಬೋಧೆ
PRATHAPPHOTOS.COM
Advertisement

ಭಗವಂತ ನಮಗೆ ಯಥೇಚ್ಛವಾಗಿ ತಿನ್ನಲು ೧೪ ದಿನಗಳನ್ನು ಕೊಟ್ಟಿರುತ್ತಾನೆ. ಬೇಕಾದ್ದನ್ನು ಬೇಕಾದಷ್ಟು ತಿನ್ನಬಹುದು. ಆದರೆ ಒಂದು ದಿನ ಏಕಾದಶಿಯ ದಿನ ಉಪವಾಸವನ್ನು ಕಡ್ಡಾಯ ಮಾಡಿರುತ್ತಾನೆ. ನಾವು ೧೫ ದಿನಗಳಿಗೆ ಒಮ್ಮೆ ಏಕಾದಶಿ ಉಪವಾಸವನ್ನು ಹೇಗೇ ಆಚರಿಸುತ್ತೇವೆ ಎಂಬುದನ್ನು ನಾವೇ ಕೇಳಿಕೊಳ್ಳಬೇಕು. ನಿಜಕ್ಕೂ ನಿರಾಹಾರರಾಗಿ ಉಪವಾಸವಿದ್ದು ದೇವರ ಧ್ಯಾನದಲ್ಲಿ ಹರಿದಿನವನ್ನು ಕಳೆಯುತ್ತೇವೆಯೇ..?
ಇಲ್ಲವೆಂಬ ಉತ್ತರ ಬಹುತೇಕರದು. ಆದರೆ ಏಕಾದಶಿ ಉಪವಾಸದ ಮಹತ್ವವನ್ನು ಅದರ ಅವಶ್ಯಕತೆ ಮತ್ತು ಮಹತ್ವವನ್ನು ಎಲ್ಲರೂ ತಿಳಿಯಬೇಕು. ನಮಗೆ ಪ್ರಪಂಚವನ್ನು ಅನುಭವಿಸಲು ತಿನ್ನಲು ಉಣ್ಣಲು ಸಕಲ ಐಶ್ವರ್ಯಗಳನ್ನು ಕೊಟ್ಟ ಭಗವಂತನ ಸಲುವಾಗಿ ಅವನ ಮಾತಿನಂತೆ ನಮ್ಮ ಸಲುವಾಗಿ ನಮ್ಮ ಹಿತಕ್ಕಾಗಿ ಏಕಾದಶಿ ಉಪವಾಸವನ್ನು ಆಚರಿಸಬೇಕು. ನಮ್ಮ ಆತ್ಮಬಲ, ನಮ್ಮ ಪ್ರಗತಿ ಮತ್ತು ಆರೋಗ್ಯಕ್ಕಾಗಿ ಒಂದು ದಿನ ಉಪವಾಸವನ್ನು ಮಾಡಬೇಕು. ಅದರಿಂದ ಏನೆಲ್ಲಾ ಸಾಧಿಸಬಹುದೆಂದು ಭಗವಂತ ಘಂಟಾಘೋಷವಾಗಿ ಹೇಳಿದ್ದಾನೆ.
ನಮಗೆ ವಾಸ ಮಾಡಲು ಮನೆಯಲ್ಲಿ ಅವಕಾಶ ಕೊಟ್ಟ ವ್ಯಕ್ತಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಿಲ್ಲ ಎಂದರೆ ಜನರು ಅಂತಹ ಕೃತಘ್ನ ವ್ಯಕ್ತಿಯನ್ನು ಬಯ್ಯುತ್ತಾರೆ. ಮನೆಯ ಮಾಲಿಕರಿಗೇ ಅವಕಾಶ ಕೊಡದಿರುವವ ಅತ್ಯಂತ ಮೂರ್ಖ ಹಾಗೇಯೇ ಮನುಷ್ಯನಿಗೆ ಯಥೇಚ್ಛವಾಗಿ ತಿನ್ನಲು ೧೪ ದಿನಗಳ ಅವಕಾಶವನ್ನು ಕೊಟ್ಟು ಪದಾರ್ಥಗಳನ್ನು ಒದಗಿಸಿರುತ್ತಾನೆ. ೩೬೫ ದಿನಗಳಲ್ಲಿ ೨೪ ದಿನಗಳನ್ನು ಬಿಟ್ಟು ಮಿಕ್ಕೆಲ್ಲ ದಿನಗಳು ತಿನ್ನುವ ಅವಕಾಶ ಇದ್ದೇ ಇರುತ್ತದೆ, ತಿನ್ನಲು ಆಹಾರ ಮತ್ತು ಆಸ್ವಾದಿಸಲು ದೇಹವನ್ನು ಕೊಟ್ಟವನು ಕೂಡ ಭಗವಂತನೇ. ಏಕಾದಶಿಯ ಅದೊಂದೇ ದಿನವನ್ನು ತನಗಾಗಿ ಮೀಸಲಿಡಲು ಭಗವಂತ ಹೇಳಿದ್ದಾನೆ. ಅದಕ್ಕೆ ಹರಿದಿನ ಎಂದೇ ಹೆಸರು ಅದೊಂದು ದಿನ ಆಹಾರ ಸೇವನೆ ಮಾಡಬೇಡ ಎಂದರೆ ನಾವು ಮನುಷ್ಯರು ಕೇಳುವುದಿಲ್ಲ. ಆರ್ಯುವೇದ ಶಾಸ್ರ‍್ತ ಹೇಳುತ್ತದೆ, ಅನೇಕ ರೋಗಗಳಿಗೆ ಪರಿಹಾರ ಏಕಾದಶಿ ಉಪವಾಸ ಎನ್ನುತ್ತದೆ. “ಲಂಘಣಮ್ ಪರಮೌಷಧಮ್” ಉಪವಾಸ ಇದು ಬಹಳ ದೊಡ್ಡ ಔಷಧ, ಎಲ್ಲ ರೀತಿಯ ರೋಗಗಳಿಗೆ ಮೂಲಭೂತ ಔಷಧ ಇಂತಹ ಉಪವಾಸವನ್ನು ನಮ್ಮ ಆರೋಗ್ಯದ ಸಲುವಾಗಿಯೇ ಮಾಡಲು ಭಗವಂತ ಹೇಳಿದ್ದಾನೆ.
ಯಾರದೋ ಸಲುವಾಗಿ ಕಾಯುತ್ತ ಇರುತ್ತೇವೆ. ನಮ್ಮವರು ಯಾರೋ ಊಟಕ್ಕೆ ಬರುತ್ತಾರೆ ಎಂದಾಗ ಅಡುಗೆಯನ್ನು ಮಾಡಿಟ್ಟುಕೊಂಡು ಕಾಯುತ್ತಾ ಇರುತ್ತಾರೆ. ಊರೊಳಗೆ ಇರುವ ಎಲ್ಲ ವಾಹನಗಳು ಬಂದು ಹೋಗುತ್ತಿರುತ್ತವೆ. ಆದರೂ ಇವರು ಊಟ ಮಾಡುವುದಿಲ್ಲ ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಅವರು ಇವರಿಗಾಗಿ ಮಾಡಿದ ತ್ಯಾಗದ ಪ್ರತೀಕವೇ ಈ ಉಪವಾಸ ನಿಮ್ಮ ಹೆಂಡತಿ, ಮಕ್ಕಳು, ತಂದೆ, ತಾಯಿ ಬಾಂಧವರು ಮಡಿದ ಸಣ್ಣ ಉಪಕಾರವನ್ನು ನೆನಸಿಕೊಂಡು ಈ ರೀತಿಯಾಗಿ ಅವರು ಬರುವವರೆಗೂ ತಿನ್ನದೇ ತ್ಯಾಗದಿಂದ ಉಪಕಾರವನ್ನು ತೋರಿಸುವದಿಲ್ಲವೇ ಹಾಗೇ ದೇವರಿಗಾಗಿ ಅವನ ನಾಮಸ್ಮರಣೆ ಮಾಡುತ್ತ ಉಪವಾಸ ಕೈಗೊಳ್ಳುವದು ದೇಹಕ್ಕೆ ಮತ್ತು ಮನಸ್ಸಿಗೂ ಆರೋಗ್ಯವಿದೆ.