ಹುಬ್ಬಳ್ಳಿ: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಯ ಬಗ್ಗೆ ಎರಡು ದಿನ ಮೀಸಲು ಇಡಲಾಗುತ್ತದೆ.
ನಗರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು ಈ ಭಾಗದ ಸಮಸ್ಯೆಗಳ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಎರಡು ದಿನ ಉತ್ತರ ಕರ್ನಾಟಕ ಸಮಸ್ಯೆ ಗಳಿಗೆ ಚರ್ಚೆ ಮೀಸಲು, ಮಂಗಳವಾರ- ಬುಧವಾರ ಎರಡು ದಿನ ಉ.ಕ ವಿಚಾರ ಚರ್ಚೆ ನಡೆಯಲಿದೆ,
ಸದನ ಆರಂಭವಾದ ತಕ್ಷಣ ಚರ್ಚೆಗೆ ಸಂಬಂಧಿಸಿದ ಸಚಿವರು ಇರಬೇಕು. ಇರಲಿಲ್ಲ ಅಂದರೆ ಸಿಎಂ ಅವರಿಗೆ ಉತ್ತರಿಸಲು ಸೂಚಿಸುತ್ತೇನೆ ಎಂದರು.ಕನಿಷ್ಠ 15 ದಿನ ಅಧಿವೇಶನ ನಡೆಸಬೇಕು. ಸರ್ಕಾರ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಅನಗತ್ಯ ಗದ್ದಲ – ಗಲಾಟೆಗೆ ಕಾಲಹರಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಅವರು ಹೇಳಿದರು.