ಉತ್ತಮ ಆರೋಗ್ಯ ಮತ್ತು ಹೆಚ್ಚು ಆಯಸ್ಸು ಹೊಂದಲು ಸಾಧ್ಯವಿದೆ

Advertisement

ಬೀದರ: ಸಿರಿಧಾನ್ಯಗಳು ಉತ್ತಮ ಪೋಷಕಾಂಶಗಳನ್ನು ಹೊಂದಿರುವುದರ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಸಹ ಹೊಂದಿವೆ ಎಂದು ಅರಣ್ಯ ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.
ಸಾವಯವ ಆಹಾರ ಮತ್ತು ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ ಸಾವಯವ ಮತ್ತು ಸಿರಿಧಾನ್ಯ ನಡಿಗೆ-2024ಕ್ಕೆ ಬೀದರ ನಲ್ಲಿಂದು ಚಾಲನೆ ನೀಡಿ (ಮ್ಯಾರಥಾನ್‌ನಲ್ಲಿ) ಮಾತನಾಡಿರುವ ಅವರು ಸಿರಿಧಾನ್ಯಗಳು ಉತ್ತಮ ಪೋಷಕಾಂಶಗಳನ್ನು ಹೊಂದಿರುವುದರ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಸಹ ಹೊಂದಿವೆ. ಇವುಗಳ ಬಳಕೆಯಿಂದ ನಾವೆಲ್ಲರೂ ಉತ್ತಮ ಆರೋಗ್ಯ ಮತ್ತು ಹೆಚ್ಚು ಆಯಸ್ಸು ಹೊಂದಲು ಸಾಧ್ಯವಿದೆ.
ಇತ್ತೀಚಿನ ದಿನಗಳಲ್ಲಿ ಕ್ರಿಮಿನಾಶಕ, ರಸಗೊಬ್ಬರ ಬಳಕೆ ಅತಿಯಾಗುತ್ತಿದೆ ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಆರೋಗ್ಯಕರ ಆಹಾರ ಬೆಳೆಯಲು ಆದ್ಯತೆ ನೀಡಬೇಕಾಗಿದೆ. ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆಯೂ ಕಡಿಮೆಯಾಗುತ್ತಿದೆ ಆದ್ದರಿಂದ ಎಲ್ಲರೂ ಸಾವಯವ ಕೃಷಿಗೆ ಒತ್ತು ನೀಡಬೇಕೆಂದು ಕರೆ ನೀಡಿದರು.