ಉಡುಪಿ: ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಸ್ಯಾಂಡಲ್‌ವುಡ್‌ನ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ತಾರಾ ಜೋಡಿ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಕನಕ ನವಗ್ರಹ ಕಿಂಡಿ ಮೂಲಕ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಕೃಷ್ಣ ಮಠದ ರಥಬೀದಿಯಲ್ಲಿರುವ ಕಾಣಿಯೂರು ಮಠಕ್ಕೂ ಭೇಟಿ ಕೊಟ್ಟರು. ಮಠಾಧೀಶ ವಿದ್ಯಾವಲ್ಲಭ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.ಶ್ರೀಗಳು ನವ ಜೋಡಿಯನ್ನು ಮಠದ ವತಿಯಿಂದ ಗೌರವಿಸಿದರು.