ಭೋಪಾಲ್: ಭಾರತದ ೧೨ ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಹಾಕಾಲ ಕಾರಿಡಾರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದ್ದಾರೆ. ಬುಧವಾರದಿಂದ ಮಹಾದೇವ ಲೋಕ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.
ಕಾರಿಡಾರ್‌ನ ೮೫೬ ಕೋಟಿ ರೂ. ವೆಚ್ಚದ ಮೊದಲ ಹಂತದ ಯೋಜನೆಯನ್ನು ಪ್ರಧಾನಿ ಲೋಕಾರ್ಪಣೆಗೊಳಿಸಿದರು. ೯೦೦ ಮೀಟರ್ ಉದ ಈ ಕಾರಿಡಾರ್ ಕಾಶಿಯ ಕಾರಿಡಾರ್‌ಗಿಂತಲೂ ದೊಡ್ಡದಾಗಿದೆ. ಈ ಸಂದರ್ಭದಲ್ಲಿ ಮೋದಿ ೯೦ ಮೀಟರ್ ಎತ್ತರದ ಶಿವನ ಮೂರ್ತಿಯನ್ನು ಅನಾವರಣಗೊಳಿಸಿದರು. ಇಲ್ಲಿ ಒಟ್ಟು ೨೦೦ ಶಿವನ ಮೂರ್ತಿಗಳು ಮತ್ತು ೧೦೮ ಕಂಬಗಳಿವೆ.
ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಆಸ್ತಿಕರನ್ನು ಆಕರ್ಷಿಸುವ ಪ್ರಮುಖ ತೀರ್ಥಕ್ಷೇತ್ರ ಮಹಾಕಾಲ ಮಂದಿರ ಕಾರಿಡಾರ್ ನಿಂದಾಗಿ ಉಜ್ಜಯಿನಿ ನಗರದ ಆರ್ಥಿಕತೆಗೆ ವಾರ್ಷಿಕ ೩೦೦ ಕೋಟಿ ರೂ.ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಏಕಕಾಲಕ್ಕೆ ೨೦ ಸಾವಿರ ಜನರಿಗೆ ಅನುಕೂಲವಾಗುವ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಮಹಾಕಾಲ ಕಾರಿಡಾರ್ ಮೂಲಕ ಮಹಾಕಾಳೇಶರ ದೇವಸ್ಥಾನಕ್ಕೆ ಹೋಗಬೇಕಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಕಾರಿಡಾರ್ ನಿರ್ಮಿಸಲಾಗಿದೆ.