ಈ ಸರ್ಕಾರ ಆಡಳಿತ ನಡೆಸುವ ವಿಶ್ವಾಸ ಕಳೆದುಕೊಂಡಿದೆ

ಆರ್‌ಎಸ್ಎಸ್
Advertisement

ತುಮಕೂರು: ಕಾಂಗ್ರೆಸ್ ಸರ್ಕಾರ ಈಗಾಗಲೇ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಕುಮಾರಸ್ವಾಮಿಯವರು ಎರಡು ಬಾರಿ ಸಿಎಂ ಆದವರು, ಎರಡು ಬಾರಿ ಅಧಿಕಾರ ಕಳೆದುಕೊಂಡಿದ್ದಾರೆ. ಅವರು ಅನುಭವದ ಮಾತು ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಆಡಳಿತ ನಡೆಸುವ ವಿಶ್ವಾಸ ಕಳೆದುಕೊಂಡಿದೆ. ಜನರೇ ಈ ಸರ್ಕಾರದ ಆಡಳಿತದ ಬಗ್ಗೆ ಬೇಸರಗೊಂಡಿದ್ದಾರೆ ಎಂದರು.
ವಾಸ್ತವ ಸ್ಥಿತಿ ಹೇಳಿ: ಇನ್ನು ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮಿಳುನಾಡಿಗೆ ನೀರು ಬಿಡದಿದ್ದರೆ ನಮ್ಮ ಅಧಿಕಾರ ಹೋಗುತ್ತದೆ ಅಂತ ಹೇಳುತ್ತಾರೆ‌. ಇವರು ಅಧಿಕಾರಕ್ಕಾಗಿ ರಾಜ್ಯದ ಹಿತ ಬಲಿ ಕೊಡುತ್ತಿದ್ದಾರೆ. ಇವರು ಬಹಿರಂಗ ಹೇಳಿಕೆ ನಿಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು. ಕೊರ್ಟ್‌ ನಲ್ಲಿ ವಾದ ಮಾಡಬೇಕು. ಸುಪ್ರೀಂ ಕೊರ್ಟ್ ನಲ್ಲಿ ಈಗಿನ ವಾಸ್ತವ ಸ್ಥಿತಿ ಹೆಳಿದರೆ ನ್ಯಾಯಾಂಗ‌ ನಿಂದನೆ ಆಗುವುದಿಲ್ಲ. ಅಧಿಕಾರವು ಹೋಗುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಸಾಹಿತಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಕಾರಣಕ್ಕೆ ಹಿಂದೂ ಕಾರ್ಯಕರ್ತನ ಬಂಧನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರದ ಅವಧಿಯಲ್ಲಿ ಫೇಕ್ ನ್ಯೂಸ್ ಹೆಸರಿನಲ್ಲಿ ಬೆದರಿಕೆ ಹಾಕುವ ಕೆಲಸ ನಡೆಸಲಾಗುತ್ತಿದೆ. ಫೆಕ್ ನ್ಯೂಸ್ ಅಂತ ಹೇಳಿ ಎಲ್ಲರನ್ನು ಬೆದರಿಸಿ ಬೇರೆ ಜಿಲ್ಲೆಗಳಿಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡುತ್ತಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ಪರಿಣಾಮ ಬೀರಲಿದೆ: ಶಾಮನೂರು ಶಿವ ಶಂಕರ ಅವರು ಹಿರಿಯರು, ಅವರು ಅಖಿಲ ಭಾರತ ವೀರಶೈವ‌ ಮಹಾಸಭೆಯ ಅಧ್ಯಕ್ಷರಾಗಿದ್ದಾರೆ. ಅವರು ಲಿಂಗಾಯತ ಅಧಿಕಾರಿಗಳಿಗೆ ಬೆಲೆ ಇಲ್ಲ ಅಂತ ಹೇಳಿದ್ದರೆ ಅದು ಮುಂದಿನ ದಿನಗಳಲ್ಲಿ ಪರಿಣಾಮ ಬೀರಲಿದೆ ಎಂದು ಹೇಳಿದರು.