ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 8 ಕ್ಕೆ

Lunar-Eclipse
Advertisement

ನವೆಂಬರ್‌ 8 ರಂದು ಈ ವರ್ಷದ ಕೊನೆಯ ಚಂದ್ರ ಗ್ರಹಣ ಜರುಗಲಿದೆ. ಚಂದ್ರ ಗ್ರಹಣವು ಕಾರ್ತಿಕ ಪೂರ್ಣಿಮೆಯ ದಿನದಂದೇ ಸಂಭವಿಸಲಿದೆ. ಈ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸಲಿದೆ. ಚಂದ್ರ ಗ್ರಹಣದ ಕಾಲವು ಭಾರತೀಯ ಕಾಲಮಾನ ನವೆಂಬರ್‌ 8 ರ ಮಧ್ಯಾಹ್ನ 1:32 ರಿಂದ ಪ್ರಾರಂಭವಾಗಿ ಸಂಜೆ 7: 27 ರವರೆಗೆ ನಡೆಯಲಿದೆ. ಈ ವಿದ್ಯಾಮಾನವು ಭಾರತದಲ್ಲಿ ನವೆಂಬರ್‌ 8ರ ಸಂಜೆ 5 ಗಂಟೆ 32 ನಿಮಿಷಕ್ಕೆ ಕಾಣಿಸಲಿದೆ. ಮತ್ತು ಸಂಜೆ 6 ಗಂಟೆ 18 ನಿಮಷಕ್ಕೆ ಮುಕ್ತಾಯಗೊಳ್ಳಲಿದೆ. ಈ ವರ್ಷದ ಕೊನೆಯ ಚಂದ್ರ ಗ್ರಹಣವು ಏಷ್ಯಾ, ಆಸ್ಟ್ರೇಲಿಯಾ, ಈಶಾನ್ಯ ಯುರೋಪ್‌, ಫೆಸಿಫಿಕ್‌ ಸಾಗರ, ಹಿಂದೂ ಮಹಾಸಾಗರ, ನಾರ್ತ್‌ ಅಮೇರಿಕಾ ಮತ್ತು ಸೌತ್‌ ಅಮೇರಿಕಾಗಳಲ್ಲಿ ಕಾಣಿಸುತ್ತದೆ. ಆದರೆ ಈ ಚಂದ್ರ ಗ್ರಹಣವು ನೈರುತ್ಯ ಯುರೋಪ್‌ ಮತ್ತು ಆಫ್ರಿಕಾ ಖಂಡಗಳಲ್ಲಿ ಕಾಣಿಸುವುದಿಲ್ಲ. ಭಾರತದಲ್ಲಿ 2022ರ ಕೊನೆಯ ಚಂದ್ರ ಗ್ರಹಣವು ಕೋಲ್ಕತ್ತಾ, ಪಾಟ್ನಾ, ರಾಂಚಿ ಮತ್ತು ಗೌಹಾಟಿ ಮುಂತಾದ ಸ್ಥಳಗಳಲ್ಲಿ ಗೋಚರಿಸಲಿದೆ.