ಮೊದಲ ಬಾರಿಗೆ ಸಣ್ಣ ಪ್ರಮಾಣದ ರಾಕೆಟ್ ವಾಹಕದಲ್ಲಿ ಹಾರಿಬಿಟ್ಟಿದ್ದ ಎರಡು ಉಪಗ್ರಹಗಳು ನಿಗದಿತ ಕಕ್ಷೆ ಸೇರದೇ ವಿಫಲಗೊಂಡಿದ್ದು, ಇಸ್ರೋದ ವೈಫಲ್ಯ ಅಚ್ಚರಿಗೆ ಕಾರಣವಾಗಿದೆ.
ಅತ್ಯಂತ ನಿಖರ, ಕರಾರುವಾಕ್ ಉಡಾವಣೆ ಮಾಡುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಆಜಾದಿ ಸ್ಯಾಟ್ ಮತ್ತು ಇಸ್ರೋ ನಿರ್ಮಿತ ಭೂಪರಿಭ್ರಮಣ ಉಪಗ್ರಹ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಎಸ್ಎಸ್ಎಲ್ವಿ(ಸ್ಮಾಲ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್) ಯಿಂದ ಉಡಾವಣೆ ಮಾಡಲಾಗಿತ್ತು. ಆದರೆ, ಅದು ನಿಗದಿತ ಕಕ್ಷೆಗೆ ಸೇರದೇ ಕೊನೆಯಲ್ಲಿ ಸಂಪರ್ಕ ಕಳೆದುಕೊಂಡಿದೆ. 8ಕೆಜಿ ತೂಕದ ಉಪಗ್ರಹವನ್ನು ವಿದ್ಯಾರ್ಥಿಗಳು ರೂಪಿಸಿದ್ದರು.