ಇಳಕಲ್ ಗೆ ಮೂರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು

Advertisement

ಇಳಕಲ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರಾದ ಇಳಕಲ್ ಗೆ ಈ ಬಾರಿ ಮೂರು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಬಂದಿವೆ. ಹತ್ತು ಸಂಘ ಸಂಸ್ಥೆಗಳಿಗೆ ಕೊಡಮಾಡುವ ಪ್ರಶಸ್ತಿಯಲ್ಲಿ ಹವ್ಯಾಸಿ ರಂಗಸಂಸ್ಥೆ ಪ್ರಶಸ್ತಿ ಇದೆ . ಅದೇ ರೀತಿ ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ಡಾ ವಿಶ್ವನಾಥ ವಂಶಾಕೃತಮಠಕ್ಕೆ ಸಲ್ಲಿಸಿದ ಜನಪದ ಸೇವೆಗಾಗಿ ಡಾ ಶಂಭು ಬಳಿಗಾರ ಪ್ರಶಸ್ತಿ ನೀಡಿದ್ದಾರೆ .ಅವರು ಇದೇ ವರ್ಷ ತಮ್ಮ ಗದಗ ಜಿಲ್ಲೆಯ ಶಿಗ್ಲಿಗೆ ಹೋಗಿದ್ದು ಅವರಿಗೆ ಗದಗ ಜಿಲ್ಲೆಯಿಂದ ಈ ಪ್ರಶಸ್ತಿ ಬಂದಿದೆ ಆದರೆ ನಗರದ ಸಾರ್ವಜನಿಕ ಮತ್ತು ಸಾಂಸ್ಕೃತಿಕ ವಲಯದ ಪ್ರಶಸ್ತಿಗಳು ನಮಗೇ ಬಂದಷ್ಟು ಸಂತಸ ತುಂಬಿದೆ.